ಗಲ್ಲಾಪೆಟ್ಟಿಗೆಯ ಅಂಕಿಅಂಶಗಳು ಆಗಾಗ್ಗೆ ನಿಮ್ಮನ್ನು ಅನಿರೀಕ್ಷಿತ ಬೆಳವಣಿಗೆಗಳ ಮೂಲಕ ಆಶ್ಚರ್ಯಗೊಳಿಸಬಹುದು. ಬಣ್ಣದ ಲೋಕದ ಮಂದಿಯ ಅದೃಷ್ಟವನ್ನು ಬದಲಾಯಿಸಲು ಒಂದು ಶುಕ್ರವಾರ ಸಾಕು ಎಂಬುದನ್ನು ಈ ವಿಚಾರ ಪದೇ ಪದೇ ಸಾಬೀತು ಮಾಡುತ್ತಿರುತ್ತದೆ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ’ಪುಷ್ಪ: ದಿ ರೈಸ್’ ಅದ್ಧೂರಿ ಆರಂಭವನ್ನು ಪಡೆದ ಬಳಿಕ ಪ್ರಚಾರದ ಕೊರತೆ ಮತ್ತು ಕಳಪೆ ವಿತರಣೆಯಿಂದಾಗಿ ಹಿಂದಿ ಬೆಲ್ಟ್ನಲ್ಲಿ ಮೊದಲ ದಿನ ಬರೀ 3 ಕೋಟಿ ರೂ. ಗಳಿಕೆ ಕಂಡಿತ್ತು. ಆದರೆ ಈ ಚಿತ್ರವು ಪ್ರೇಕ್ಷಕರನ್ನು ಎಷ್ಟರ ಮಟ್ಟಿಗೆ ಸೆಳೆಯಿತು ಎಂದರೆ ಮುಂದಿನ ಮೂರು ವಾರಗಳವರೆಗೆ ಯಾವೊಂದು ದಿನವೂ ತನ್ನ ಮೊದಲ ದಿನಕ್ಕಿಂತ ಕಡಿಮೆ ಗಳಿಕೆ ಕಾಣಲಿಲ್ಲ.
ಹಿಮವರ್ಷದ ನಡುವೆ ಮದುವೆ ಮಂಟಪಕ್ಕೆ ಹೋಗಲು ವರನಿಂದ ಜೆಸಿಬಿ ಬಳಕೆ
’ಪುಷ್ಪ’ ಚಿತ್ರವು ’ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಮತ್ತು ’83’ ಅಲೆಗಳ ವಿರುದ್ಧ ಧೈರ್ಯದಿಂದ ಈಜಿ ಸಾಗಿ ಈ ಹಂತ ತಲುಪಿದೆ. ಬಾಕ್ಸ್ ಆಫೀಸ್ ಮಾತ್ರವಲ್ಲದೆ, ’ಪುಷ್ಪ: ದಿ ರೈಸ್’ ಸಾಮಾಜಿಕ ಜಾಲತಾಣಗಳಲ್ಲಿಯೂ ಸಂಚಲನ ಮೂಡಿಸಿದ್ದು, ಪುಷ್ಪರಾಜನ ಸಿಗ್ನೇಚರ್ ಸ್ಟೆಪ್ ಮತ್ತು ಪುಷ್ಪನ ಹಾಡುಗಳು ವಿಶ್ವದಾದ್ಯಂತ ಗಮನ ಸೆಳೆದಿವೆ. ಟಾಲಿವುಡ್ನ ಈ ಚಿತ್ರವು ತನ್ನದೇ ಅಂಗಳದಲ್ಲಿ ’83’ಅನ್ನು ಸಹ ಹಿಂದಿಕ್ಕಿ. ಮುಂಬರುವ ವಾರಾಂತ್ಯದಲ್ಲಿ 100 ಕೋಟಿ ನೆಟ್ ಕ್ಲಬ್ ಸೇರಲು ಸಜ್ಜಾಗಿದೆ.
ರಾತ್ರಿ ಕರ್ಫ್ಯೂ, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ನಿರ್ಬಂಧಗಳು ಮತ್ತು ಹಲವಾರು ರಾಜ್ಯಗಳಲ್ಲಿ ಲಾಕ್ಡೌನ್ಗಳ ಹೊರತಾಗಿಯೂ ಪುಷ್ಪಾ ಓಟ ನಿಧಾನಗೊಂಡಿಲ್ಲ. ಪುಷ್ಪಾ ಡಿಜಿಟಲ್ ಆವೃತ್ತಿಯ ಬಿಡುಗಡೆಯು ಸಹ ಬಾಕ್ಸ್ ಆಫೀಸ್ ಅಂಕಿಗಳ ಮೇಲೆ ಪರಿಣಾಮ ಬೀರಲಿಲ್ಲ.
’ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಮತ್ತು ’ಗದರ್: ಏಕ್ ಪ್ರೇಮ್ ಕಥಾ’ ನಂತರ ಆರನೇ ವಾರದ ನಿವ್ವಳ ಗಳಿಕೆಯ ಸಾರ್ವಕಾಲಿಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಅಲ್ಲು ಅರ್ಜುನ್ ಅವರ ’ಪುಷ್ಪಾ’ ಚಿತ್ರವು ಪ್ರಭಾಸ್ ಅಭಿನಯದ ’ಬಾಹುಬಲಿ: ದಿ ಕನ್ಕ್ಲೂಷನ್’ ಹಿಂದಿ ಆವೃತ್ತಿಯನ್ನು ಗಳಿಕೆಯ ವಿಚಾರದಲ್ಲಿ ತನ್ನ ಆರನೇ ವಾರದಲ್ಲಿ ಸೋಲಿಸಿದೆ.
ಆರನೇ ವಾರದ ನಿವ್ವಳ ಗಳಿಕೆಗಳ ಸಾರ್ವಕಾಲಿಕ ಗರಿಷ್ಠಗಳ ಪಟ್ಟಿ ಇಲ್ಲಿದೆ:-
ಉರಿ: ದಿ ಸರ್ಜಿಕಲ್ ಸ್ಟ್ರೈಕ್: 11.60 ಕೋಟಿ
ಗದರ್: ಏಕ್ ಪ್ರೇಮ್ ಕಥಾ: 6.10 ಕೋಟಿ
ಪುಷ್ಪಾ: ದಿ ರೈಸ್: 6 ಕೋಟಿ
ಬದಾಯಿ ಹೋ: 5.70 ಕೋಟಿ
ಬಾಹುಬಲಿ: ಕಂಕ್ಲೂಷನ್: 5.40 ಕೋಟಿ
ಪುಷ್ಪಾ: ದಿ ರೈಸ್ ಟ್ರೆಂಡಿಂಗ್ ಆಗುತ್ತಿರುವ ಪರಿ ನೋಡಿದರೆ ಮುಂದಿನ ಎರಡು ವಾರಗಳಲ್ಲಿ ಯಾವುದೇ ಸ್ಪರ್ಧೆಯಿಲ್ಲದೇ ಅನೇಕ ದಾಖಲೆಗಳನ್ನು ಮುರಿಯಲಿದೆ ಎಂದು ಹೇಳಬಹುದು. ಪುಷ್ಪಾ ಮೊದಲ ಭಾಗದ ಅದ್ಧೂರಿ ಯಶಸ್ಸಿನ ಬಳಿಕ ಪುಷ್ಪಾ: ದಿ ರೂಲ್ಗೆ ವೇದಿಕೆ ಸಿದ್ಧವಾಗಿದ್ದು, ಚಿತ್ರೀಕರಣ ಪ್ರಾರಂಭವಾಗುವ ಮೊದಲೇ ದೇಶಾದ್ಯಂತ ನಿರೀಕ್ಷೆ ಹುಟ್ಟಿಸಿದೆ.