ಮೈಸೂರು: ಕಣ್ಣಾಮುಚ್ಚಾಲೆ ಆಡುವಾಗ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದಾರೆ. ಐಸ್ ಕ್ರೀಂ ಬಾಕ್ಸ್ ನಲ್ಲಿ ಬಾಲಕಿಯರು ಕುಳಿತುಕೊಂಡಿದ್ದು, ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಬಾಕ್ಸ್ ಓಪನ್ ಆಗದ ಕಾರಣ ಬಾಲಕಿಯರು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ನಡೆದಿದೆ.
ಉಸಿರುಗಟ್ಟಿ 12 ವರ್ಷದ ಭಾಗ್ಯಾ ಹಾಗೂ 7 ವರ್ಷದ ಕಾವ್ಯಾ ಸಾವನ್ನಪ್ಪಿದ್ದಾರೆ. ನಂಜನಗೂಡು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.