ಬೋರ್ನ್ವಿಟಾದ ರುಚಿ ನಮ್ಮ ಬಾಲ್ಯವನ್ನು ನೆನಪಿಸುತ್ತದೆ. ಬಹುತೇಕ ಮಂದಿ ನಾವು ಚಿಕ್ಕವರಿರುವಾಗ ಪ್ರತಿದಿನ ಶಾಲೆಗೆ ಹೋಗುವ ಬೋರ್ನ್ವಿಟಾ ಹಾಲನ್ನು ಕುಡಿಯುತ್ತಾ ಬೆಳೆದಿದ್ದೇವೆ. ಅಲ್ಲದೆ ಅದರ ಪೌಡರ್ ಗಟ್ಟಿಯಾದಾಗ ಚಾಕೋಲೇಟ್ ನಂತೆ ಜಗಿದು ತಿಂದಿದ್ದೇವೆ.
ಇತ್ತೀಚಿನ ದಿನಗಳಲ್ಲೂ ಕೂಡ ಬೋರ್ನ್ವಿಟಾ ಟ್ರೆಂಡ್ ಇನ್ನೂ ಮಾಸಿಲ್ಲ. ಹಾಲಿನ ಜೊತೆ ಮಿಕ್ಸ್ ಮಾಡಿ ಕುಡಿಯುವುದಕ್ಕೆ ಮಾತ್ರವಲ್ಲ, ಇದನ್ನು ಸಿಹಿ-ತಿಂಡಿಯಾಗಿಯೂ ಉಪಯೋಗಿಸುತ್ತಾರೆ. ಹೌದು, ದೆಹಲಿಯ ಈ ಸಿಹಿತಿಂಡಿ ಅಂಗಡಿಯು ಬೋರ್ನ್ವಿಟಾ ಬರ್ಫಿಯನ್ನು ಮಾರಾಟ ಮಾಡುತ್ತಿದ್ದು, ಪ್ರಸಿದ್ಧಿ ಪಡೆದಿದೆ.
ಚಾಕೊಲೇಟ್ ಸುವಾಸನೆಯ ಬರ್ಫಿಯನ್ನು ಒಣ ಹಣ್ಣುಗಳು, ತುಪ್ಪ ಮತ್ತು ಬೋರ್ನ್ವಿಟಾದಿಂದ ತಯಾರಿಸಲಾಗುತ್ತದೆ. ಇದರ ವಿಡಿಯೋವನ್ನು ಅರ್ಜುನ್ ಚೌಹಾಣ್ ಅವರ ಇನ್ಸ್ಟಾಗ್ರಾಮ್ನಲ್ಲಿ ಫುಡ್ ವ್ಲಾಗಿಂಗ್ ಪುಟದಿಂದ ಹಂಚಿಕೊಳ್ಳಲಾಗಿದೆ.
ವಿಡಿಯೋದಲ್ಲಿ ಬೋರ್ನ್ವಿಟಾ ಬರ್ಫಿ, ಸಕ್ಕರೆ ಪಾಕವನ್ನು ತಯಾರಿಸುವುದನ್ನು ತೋರಿಸುತ್ತದೆ. ಸಿಹಿ ತಯಾರಕರು ಗೋಡಂಬಿ ಪೇಸ್ಟ್ ಅನ್ನು ಸೇರಿಸುತ್ತಾರೆ. ನಂತರ ಎರಡು ಪದಾರ್ಥಗಳನ್ನು ಒಟ್ಟಿಗೆ ಮಿಶ್ರಣ ಮಾಡುತ್ತಾರೆ. ಸ್ವಲ್ಪ ಸಮಯದವರೆಗೆ ಪೇಸ್ಟ್ ಅನ್ನು ಬೇಯಿಸಿದ ನಂತರ, ಮಿಶ್ರಣಕ್ಕೆ ಬೋರ್ನ್ವಿಟಾವನ್ನು ಸೇರಿಸುತ್ತಾರೆ. ನಂತರ ತುಪ್ಪವನ್ನು ಹಾಕಲಾಗುತ್ತದೆ. ಆ ಬಳಿಕ ಒಣ ಹಣ್ಣುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಲಾಗುತ್ತದೆ. ಅದು ಆಕಾರವನ್ನು ಪಡೆಯಲು ಪ್ರಾರಂಭವಾಗುವವರೆಗೆ ಬೇಯಿಸುತ್ತಾರೆ. ಬಳಿಕ ಅದನ್ನು ಮತ್ತೊಂದು ಪಾತ್ರೆಗೆ ವರ್ಗಾಯಿಸಿ, ಕೆಲ ಹೊತ್ತು ಹಾಗೆ ಬಿಡಲಾಗುತ್ತದೆ.
ವಿಡಿಯೊವನ್ನು ಹಂಚಿಕೊಳ್ಳುತ್ತಾ, ಬೋರ್ನ್ವಿಟಾ ಬರ್ಫಿಯನ್ನು ಎಂದಾದರೂ ಪ್ರಯತ್ನಿಸಿದ್ದೀರಾ? ಎಂದು ಪೋಸ್ಟ್ ಗೆ ಶೀರ್ಷಿಕೆ ನೀಡಲಾಗಿದೆ. ದೆಹಲಿಯ ಮೌಜ್ಪುರದಲ್ಲಿ ಶಗುನ್ ಸ್ವೀಟ್ಸ್ ಎಂಬ ಸಿಹಿ-ತಿಂಡಿ ಅಂಗಡಿಯಲ್ಲಿ ಈ ಬರ್ಫಿಯನ್ನು ತಯಾರಿಸಲಾಗಿದೆ. ವಿಡಿಯೋ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.
https://youtu.be/datBtlmKVlc