ಚೆನ್ನೈ: ಚೆನ್ನೈನಲ್ಲಿ ನಡೆದ ಎಐಎಡಿಎಂಕೆ ಸಭೆಯಲ್ಲಿ ಹೈಡ್ರಾಮಾ ನಡೆದಿದೆ. ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರ ಮೇಲೆ ವಾಟರ್ ಬಾಟಲ್ ಎಸೆಯಲಾಗಿದೆ.
ಮಾಜಿ ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ಬೆಂಬಲಿಗರು ಬಾಟಲ್ ಗಳನ್ನು ಎಸೆದು ಹಲ್ಲೆಗೆ ಯತ್ನಿಸಿದ್ದಾರೆ. ಸಭೆಯಲ್ಲಿ ಭಾಷಣ ಮಾಡದೆ ಓ. ಪನ್ನೀರ್ ಸೆಲ್ವಂ ತೆರಳಿದ್ದಾರೆ. ಜುಲೈ 11 ಕ್ಕೆ ಪಕ್ಷದ ಜನರಲ್ ಕೌನ್ಸಿಲ್ ಸಭೆ ಮುಂದೂಡಲಾಗಿದೆ.
ತಮಿಳುನಾಡಿನ ಪ್ರತಿಪಕ್ಷವಾದ ಎಐಎಡಿಎಂಕೆ ನಾಯಕತ್ವಕ್ಕಾಗಿ ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ನಡುವೆ ಹಗ್ಗಜಗ್ಗಾಟ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿದೆ. ಹಿರಿಯ ನಾಯಕರು ‘ಏಕೈಕ ನಾಯಕತ್ವ’ದ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದಾಗ, ಸಭೆ ಮುಕ್ತಾಯಗೊಳ್ಳುವ ಕೆಲವೇ ನಿಮಿಷಗಳಿಗೆ ಮುನ್ನ ನಿರ್ಗಮಿಸಿದ ಪಕ್ಷದ ಮುಖ್ಯಸ್ಥ ಓ. ಪನ್ನೀರ್ ಸೆಲ್ವಂ ಮೇಲೆ ಎಡಪ್ಪಾಡಿ ಪಳನಿಸ್ವಾಮಿ ಬೆಂಬಲಿಗರು ನೀರಿನ ಬಾಟಲಿಗಳನ್ನು ಎಸೆದಿದ್ದಾರೆ.