alex Certify ಕೊರೊನಾ ಲಸಿಕೆ ಪಡೆದವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಪಡೆದವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್

ಕೊರೊನಾದಿಂದ ಸಾವಿಗೀಡಾಗೋದನ್ನ ತಡೆಯುವುದರಲ್ಲಿ ಕೋವಿಶೀಲ್ಡ್​ ಹಾಗೂ ಕೋವ್ಯಾಕ್ಸಿನ್​ ಲಸಿಕೆಗಳ ಎರಡು ಡೋಸ್​ಗಳು 98 ಪ್ರತಿಶತ ಪರಿಣಾಮಕಾರಿಯಾಗಿದೆ. ಕೇವಲ ಒಂದು ಡೋಸ್​ ಲಸಿಕೆಯು ಕೊರೊನಾ ಸಾವಿನ ವಿರುದ್ಧ 92 ಪ್ರತಿಶತ ಪರಿಣಾಮಕಾರಿ ಎಂದು ಎಂದು ಕೇಂದ್ರ ಸರ್ಕಾರ ಹೇಳಿದೆ. ಪಂಜಾಬ್​ನಲ್ಲಿ ಪೊಲೀಸ್​ ಸಿಬ್ಬಂದಿ ಮೇಲೆ ನಡೆಸಲಾದ ಸಮೀಕ್ಷೆ ಆಧರಿಸಿ ಕೇಂದ್ರ ಸರ್ಕಾರ ಈ ಹೇಳಿಕೆ ನೀಡಿದೆ.

ಪಂಜಾಬ್​ ಸರ್ಕಾರದ ಸಹಯೋಗದೊಂದಿಗೆ ಚಂಡೀಗಢ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯು ಈ ಅಧ್ಯಯನವನ್ನ ಕೈಗೊಂಡಿತ್ತು.

ಈ ಅಧ್ಯಯನದ ದತ್ತಾಂಶಗಳನ್ನ ಬಹಿರಂಗಪಡಿಸಿದ ನೀತಿ ಆಯೋಗದ ಸದಸ್ಯ ಡಾ. ವಿಕೆ ಪೌಲ್​, 4868 ಪೊಲೀಸರು ಲಸಿಕೆಯನ್ನ ಪಡೆದಿರಲಿಲ್ಲ. ಇದರಲ್ಲಿ 15 ಮಂದಿ ಕೊರೊನಾದಿಂದ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ರು.

ಕೊರೊನಾ ಮೊದಲ ಡೋಸ್​ ಪಡೆದ 35,856 ಪೊಲೀಸ್​ ಅಧಿಕಾರಿಗಳಲ್ಲಿ ಸಾವಿನ ಪ್ರಮಾಣ 0.25 ಪ್ರತಿಶತವಿದ್ದರೆ ಎರಡೂ ಡೋಸ್​ 42,720 ಪೊಲೀಸರಲ್ಲಿ ಸಾವಿನ ಪ್ರಮಾಣ ಪ್ರತಿ ಸಾವಿರ ಮಂದಿಯಲ್ಲಿ 0.05 ಪ್ರತಿಶತ ಮಾತ್ರ ಇದೆ ಎಂದು ಹೇಳಿದ್ದಾರೆ.

ಈ ಅಧ್ಯಯನದಿಂದ ದೊರೆತ ಫಲಿತಾಂಶವನ್ನ ನೋಡಿದಾಗ ಕೊರೊನಾ ಲಸಿಕೆಯು ಸೋಂಕಿನ ಗಂಭೀರ ಲಕ್ಷಣ ಹಾಗೂ ಸಾವಿನ ಪ್ರಮಾಣವನ್ನ ಕಡಿಮೆ ಮಾಡುತ್ತೆ ಅನ್ನೋದು ಸ್ಪಷ್ಟವಾಗಿದೆ. ಹೀಗಾಗಿ ಕೊರೊನಾ ಲಸಿಕೆಗಳ ಮೇಲೆ ನಂಬಿಕೆ ಇಡಿ ಎಂದು ಪೌಲ್​ ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...