alex Certify ಸೇತುವೆ ಮೇಲಿದ್ದಾಗಲೇ ರೈಲಿಗೆ ಬೆಂಕಿ…! ಘಟನೆಯ ಭಯಾನಕ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೇತುವೆ ಮೇಲಿದ್ದಾಗಲೇ ರೈಲಿಗೆ ಬೆಂಕಿ…! ಘಟನೆಯ ಭಯಾನಕ ವಿಡಿಯೋ ವೈರಲ್

ಅಮೇರಿಕಾದ ಬಾಸ್ಟನ್​ ಹೊರವಲಯದಲ್ಲಿರುವ ಮಿಸ್ಟಿಕ್​ ನದಿಯ ಸೇತುವೆಯ ಮೇಲೆ ಹಾದುಹೋಗುವಾಗ ರೈಲಿಗೆ ಬೆಂಕಿ ಹತ್ತಿಕೊಂಡಿದ್ದು, ಆ ಭಯಾನಕ ಘಟನೆಯ ವಿಡಿಯೋ ವೈರಲ್​ ಆಗಿದೆ.

ರೈಲಿನ ಮುಂಭಾಗ ವಿಡಿಯೋದಲ್ಲಿ ಕಾಣಿಸುತ್ತಿದ್ದು, ಕೋಚ್​ಗಳಿಂದ ದಟ್ಟವಾದ ಕಪ್ಪು ಹೊಗೆಯು ಜ್ವಾಲೆ ರೂಪದಲ್ಲಿ ಏರುತ್ತಿರುವುದನ್ನು ಕಾಣಬಹುದು.

ಅನೇಕ ಪ್ರಯಾಣಿಕರು ಬೆಂಕಿಯಿಂದ ತಪ್ಪಿಸಿಕೊಳ್ಳಲು ರೈಲಿನ ಕಿಟಕಿಗಳಿಂದ ಜಿಗಿಯಬೇಕಾಯಿತು. ಅದೃಷ್ಟವಶಾತ್​ ಯಾರಿಗೂ ಗಾಯಗಳಾಗಿಲ್ಲ. ಕೊನೆಗೆ ಸುಮಾರು 200 ಜನರನ್ನು ಸಬ್​ವೇ ರೈಲಿನಿಂದ ಸ್ಥಳಾಂತರಿಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್​ ಕಾರ್​ನಿಂದ ಮೆಟಲ್​ ಸ್ಟ್ರಿಪ್​ ಸಡಿಲಗೊಂಡು ಅದರ ಮೂಲಕ ವಿದ್ಯುತ್​ ಸಂಪರ್ಕ ಹೊಂದಿದ್ದ ಮೂರನೇ ಹಳಿಯೊಂದಿಗೆ ಸಂಪರ್ಕ ಸಾಧಿಸಿದಾಗ ಬೆಂಕಿ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆ ಸಂದರ್ಭ ಹೇಗಿತ್ತು ಎಂದು ಕೆಲವು ಪ್ರಯಾಣಿಕರು ಹೇಳಿಕೊಂಡಿದ್ದಾರೆ. ರೈಲ್​ ಕೋಚ್​ ಒಳಗೆ ಹೊಗೆ ಬರುತ್ತಿತ್ತು. ಎಮರ್ಜೆನ್ಸಿ ಎಕ್ಸಿಟ್​ ಮೂಲಕ ಹೊರ ಹೋಗಲು ಪ್ರಯತ್ನ ನಡೆಸಲಾಯಿತು. ಎಲ್ಲರೂ ಒಟ್ಟಿಗೆ ಪ್ರಯತ್ನ ನಡೆಸಿದರು. ಈ ನಡುವೆ ಕೆಲವರು ಕಿಟಿಕಿಯಿಂದ ತಮ್ಮ ಲಗೇಜ್​ನೊಂದಿಗೆ ಹರಿಬಿರಿಯಲ್ಲಿ ಇಳಿಯಬೇಕಾಯಿತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...