ಪೋಷಕರಾದ ನಂತರ ತಾಯಿ ಹಾಗೂ ತಂದೆ ಇಬ್ಬರೂ ರಜೆ ಪಡೆಯಬಹುದು. ಮಾತೃತ್ವ ಹಾಗೂ ಪಿತೃತ್ವ ರಜೆಯನ್ನು ಅನೇಕ ಕಚೇರಿಗಳು ನೀಡ್ತಿವೆ. ಮಕ್ಕಳ ಪಾಲನೆಗೆ ನೆರವಾಗ್ಲಿ ಎನ್ನುವ ಕಾರಣಕ್ಕೆ ರಜೆ ನೀಡಲಾಗುತ್ತದೆ. ಈ ಬಗ್ಗೆ ಸಾಕು ಪ್ರಾಣಿ ದತ್ತು ಪಡೆಯುವ ಜನರಿಗೆ ರಜೆ ನೀಡಿದ್ರೆ ಹೇಗೆ ಎಂಬ ಚರ್ಚೆಯಾಗ್ತಿದೆ.
ಬಾಕ್ಸ್ ಪಾರ್ಕ್ ಎಂಬ ಕಂಪನಿ ನಡೆಸುತ್ತಿರುವ ರೋಜರ್ ವೇಡ್, ಹೊಸ ಸಾಕು ಪ್ರಾಣಿಯನ್ನು ಮನೆಗೆ ತಂದ ಉದ್ಯೋಗಿಗಳಿಗೆ ರಜೆ ನೀಡಬೇಕೆನ್ನುವ ಮೂಲಕ ಚರ್ಚೆಗೆ ಕಾರಣವಾಗಿದ್ದಾರೆ. ಅವರ ಉದ್ಯೋಗಿಯೊಬ್ಬರು, ಸಾಕು ಪ್ರಾಣಿ ಮನೆಗೆ ಬಂದ ಕಾರಣಕ್ಕೆ ರಜೆ ಕೇಳಿದ್ದರಂತೆ. ಇದ್ರಿಂದ ರೋಜರ್ ಗೆ ಈ ಐಡಿಯಾ ಬಂದಿದೆ. ಮಕ್ಕಳಂತೆ, ಸಾಕು ಪ್ರಾಣಿಗಳಿಗೆ ಮನೆಗೆ ಹೊಂದಿಕೊಳ್ಳಲು ಸಮಯ ಬೇಕು. ಹಾಗಾಗಿ ಅದನ್ನು ತಂದ ಪಾಲಕರಿಗೆ ರಜೆ ನೀಡಬೇಕೆಂದು ಅವರು ವಾದಿಸಿದ್ದಾರೆ.
ವಾಲೆಟ್ ಕಳೆದುಕೊಂಡರೂ ವಿಳಂಬವಿಲ್ಲದೆ ಆಹಾರ ತಲುಪಿಸಿದ ಜೊಮ್ಯಾಟೊ ಬಾಯ್‍ಗೆ ವ್ಯಾಪಕ ಪ್ರಶಂಸೆ
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಶೇಕಡಾ 61 ರಷ್ಟು ಜನರು ಇದನ್ನು ವಿರೋಧಿಸಿದ್ದಾರೆ. ಜಗತ್ತಿಗೆ ಹುಚ್ಚು ಹಿಡಿದಿದೆ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಕೇವಲ ಶೇಕಡಾ 39 ರಷ್ಟು ಮಂದಿ ರಜೆಯನ್ನು ಸಮರ್ಥಿಸಿಕೊಂಡಿದ್ದಾರೆ.
ರೋಜರ್ ವೇಡ್, ತಮ್ಮ ಉದ್ಯೋಗಿಗೆ ರಜೆಯ ಬದಲು ಮನೆಯಿಂದ ಕೆಲಸ ಮಾಡುವ ಅವಕಾಶ ನೀಡಿದ್ದಾರೆ. ಮನೆಯಿಂದ ಕೆಲಸ ಮಾಡಿದ್ರೆ ಕೆಲಸದ ಜೊತೆ ನಾಯಿಯನ್ನು ನೋಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ನಾಯಿಯನ್ನು ದತ್ತು ತೆಗೆದುಕೊಂಡ್ರೆ ರಜೆ ನೀಡುವ ಯಾವುದೇ ಕಾನೂನು ಜಾರಿಯಲ್ಲಿಲ್ಲ. ಅನೇಕ ಕಂಪನಿಗಳ ಬಗ್ಗೆ ಆಲೋಚನೆ ಮಾಡಿವೆ. ಪ್ರಾಣಿ ವಿಮೆ ಬಗ್ಗೆಯೂ ಕಂಪನಿಗಳು ಆಲೋಚನೆ ನಡೆಸುತ್ತಿವೆ.