ನಿಯಮ ಪಾಲನೆ ಹೆಸರಲ್ಲಿ ಸಂದರ್ಭಗಳನ್ನು ಮರೆತು ವರ್ತಿಸುವ ಬಾಸ್‌ಗಳಿಗೆ ತಕ್ಕ ಪಾಠ ಕಲಿಸಿದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆನ್‌ಲೈನ್ ಸಭೆಯೊಂದರಲ್ಲಿ ಉದ್ಯೋಗಿಯೊಬ್ಬರು ಕ್ಯಾಮೆರಾ ಆನ್ ಮಾಡಲು ನಿರಾಕರಿಸಿದಾಗ, ಬಾಸ್ ಒತ್ತಾಯಿಸಿದ್ದರಿಂದ ಅನಿವಾರ್ಯವಾಗಿ ಕ್ಯಾಮೆರಾ ಆನ್ ಮಾಡಿದ್ದು, ಆಗ ನಡೆದ ಘಟನೆ ಎಲ್ಲರ ಗಮನ ಸೆಳೆದಿದೆ.
ರೆಡ್ಡಿಟ್‌ನಲ್ಲಿ ವೈರಲ್ ಆದ ಪೋಸ್ಟ್‌ನಲ್ಲಿ, ಉದ್ಯೋಗಿ ತಮ್ಮ ಬಾಸ್ ಮಾರ್ಕ್‌ನೊಂದಿಗೆ ನಡೆದ ಸಂಭಾಷಣೆಯನ್ನು ವಿವರಿಸಿದ್ದಾರೆ. ಮಾರ್ಕ್ “ನಿಯಮಗಳ ಕಟ್ಟಾಳು” ಆಗಿದ್ದರು. “ಅವರು ತಮ್ಮ ತಂಡದಲ್ಲಿ ಚಾಟಿಂಗ್ ಮಾಡಲು ಅನುಮತಿಸದ ಮತ್ತು ನಮ್ಮ ತಂಡವು ಬಾಹ್ಯವಾಗಿದ್ದರೂ, ನಾವೆಲ್ಲರೂ ದೂರದಲ್ಲಿ ವಾಸಿಸುತ್ತಿದ್ದರೂ ಸಹ ಕಚೇರಿ ದಿನವನ್ನು ಯಾವುದಕ್ಕಿಂತಲೂ ಹೆಚ್ಚು ಇಷ್ಟಪಡುವ ರೀತಿಯ ವ್ಯಕ್ತಿಯಾಗಿದ್ದರು” ಎಂದು ಉದ್ಯೋಗಿ, ಮಾರ್ಕ್‌ನ ವ್ಯಕ್ತಿತ್ವವನ್ನು ವಿವರಿಸಿದ್ದಾರೆ.
ನಂತರ ಉದ್ಯೋಗಿ, ಅವರಿಗೆ ನಿಯಮಿತ ಆಸ್ಪತ್ರೆಯ ಇನ್‌ಫ್ಯೂಷನ್‌ಗಳ ಅಗತ್ಯವಿರುವ ದೀರ್ಘಕಾಲದ ಕಾಯಿಲೆ ಇದೆ ಎಂದು ವಿವರಿಸಿದ್ದಾರೆ. “ಮಾರ್ಕ್ ಚಾಟಿಂಗ್ ಮಾಡಲು ಬಯಸದ ಕಾರಣ, ನನಗೆ ಈ ರೋಗವಿದೆ ಎಂದು ಅವರಿಗೆ ತಿಳಿದಿರಲಿಲ್ಲ” ಎಂದು ಅವರು ಹೇಳಿದ್ದಾರೆ.
ಒಂದು ದಿನ, ಉದ್ಯೋಗಿ ಆಸ್ಪತ್ರೆಯ ಹಾಸಿಗೆಯಿಂದ ಕೆಲಸ ಮಾಡುತ್ತಿದ್ದಾಗ, ಮಾರ್ಕ್ ವರ್ಚುವಲ್ ಸಭೆಯ ಸಮಯದಲ್ಲಿ ಕ್ಯಾಮೆರಾವನ್ನು ಆನ್ ಮಾಡಲು ಒತ್ತಾಯಿಸಿದ್ದಾನೆ. ವಿವರಣೆಯನ್ನು ತಪ್ಪಿಸಲು ಉದ್ಯೋಗಿ ಮೊದಲು ನಿರಾಕರಿಸಿದನಾದರೂ, ಮಾರ್ಕ್ ಒತ್ತಾಯಿಸಿದ್ದರಿಂದ ಅನಿವಾರ್ಯವಾಗಿ ಕ್ಯಾಮೆರಾ ಆನ್ ಮಾಡಿದ್ದಾರೆ. ಆಗ ಆಸ್ಪತ್ರೆಯ ಕೋಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉದ್ಯೋಗಿಯನ್ನು ನೋಡಿ ಬಾಸ್ ಆಶ್ಚರ್ಯಚಕಿತನಾಗಿದ್ದಾನೆ.
“ನಾನು ನನ್ನ ಕ್ಯಾಮೆರಾವನ್ನು ಆನ್ ಮಾಡಿದ್ದು, ಅವರು ನನ್ನನ್ನು ಆಸ್ಪತ್ರೆಯ ಕೋಣೆಯಲ್ಲಿ ಸ್ಪಷ್ಟವಾಗಿ ನೋಡಿದಾಗ ಅವರ ಮುಖ ಕಂಗೆಟ್ಟಿತು. ನಾನು ಚಿಕಿತ್ಸೆ ಪಡೆಯುತ್ತಿರುವಾಗ ಕ್ಯಾಮೆರಾ ತೋರಿಸುವುದು ಇಷ್ಟವಿರಲಿಲ್ಲವಾದರೂ ಅನಿವಾರ್ಯವಾಗಿ ಮಾಡಬೇಕಾಯಿತು” ಎಂದು ಉದ್ಯೋಗಿ ಹೇಳಿದ್ದಾರೆ.
ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಉದ್ಯೋಗಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.