alex Certify ಅನಾರೋಗ್ಯದ ರಜೆಗೆ ಅರ್ಜಿ ಸಲ್ಲಿಸಲು ಬಲವಂತ ಮಾಡಿದ ಬಾಸ್‌ಗೆ ಈ ಮಹಿಳಾ ಉದ್ಯೋಗಿ ಮಾಡಿದ್ದೇನು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಾರೋಗ್ಯದ ರಜೆಗೆ ಅರ್ಜಿ ಸಲ್ಲಿಸಲು ಬಲವಂತ ಮಾಡಿದ ಬಾಸ್‌ಗೆ ಈ ಮಹಿಳಾ ಉದ್ಯೋಗಿ ಮಾಡಿದ್ದೇನು ಗೊತ್ತಾ…..?

ತನಗೆ ಆರೋಗ್ಯ ಸರಿಯಾಗಿಲ್ಲವೆಂದು ಹೇಳಿದ ಮಹಿಳಾ ಉದ್ಯೋಗಿಯೊಬ್ಬರಿಗೆ ಅಧಿಕೃತವಾಗಿ ಸಿಕ್ ಲೀವ್‌ಗೆ ಅರ್ಜಿ ಹಾಕಲು ಆಕೆಯ ಉದ್ಯೋಗದಾತ ಸಂಸ್ಥೆ ತಿಳಿಸಿದೆ.

ತೀವ್ರ ಜ್ವರದಿಂದ ಬಳಲುತ್ತಿದ್ದ ಈಕೆಗೆ ವೈದ್ಯರ ಬಳಿ ಹೋಗಲು ಬಿಡದೇ, ಕೆಲಸ ಮಾಡುವ ಜಾಗಕ್ಕೇ ಬಂದು, ವೈದ್ಯರ ಪ್ರಮಾಣ ಪತ್ರ ತೋರಿಸಿ, ಅರ್ಜಿ ಹಾಕಲು ಆಗ್ರಹಿಸಲಾಗಿದೆ. ಇಲ್ಲವಾದಲ್ಲಿ ಕೆಲಸದಿಂದ ಫೈರ್‌ ಮಾಡುವ ಬೆದರಿಕೆಯನ್ನೂ ಸಹ ಆಕೆಯ ಸೀನಿಯರ್‌ ಹಾಕಿದ್ದಾನೆ.

ಇಂಗ್ಲೆಂಡ್‌ನ ಸೂಪರ್‌ ಮಾರ್ಕೆಟ್ ಒಂದರಲ್ಲಿ ಕೆಲಸ ಮಾಡುವ ಕಾತ್‌, “ನಾನು ಎಂದಿಗೂ ಲೇಟ್ ಆಗಿ ಕೆಲಸಕ್ಕೆ ಬಂದಿಲ್ಲ, ಬಹಳಷ್ಟು ಸಲ ಬೇಗನೇ ಕೆಲಸದ ಜಾಗಕ್ಕೆ ಬಂದಿದ್ದೇನೆ. ತೀರಾ ಅಪರೂಪಕ್ಕೆ ಅನಾರೋಗ್ಯದ ಕಾರಣ ಕೊಟ್ಟಿದ್ದೇನೆ,” ಎಂದು ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದು, ತನ್ನ ಹಾಗೂ ತನ್ನ ಮ್ಯಾನೇಜರ್‌ನ ನಡುವೆ ನಡೆದ ಸಂಭಾಷಣೆಯ ವಿವರಗಳನ್ನು ಹಂಚಿಕೊಂಡಿದ್ದಾರೆ.

SHOCKING NEWS: ಮೆಡಿಕಲ್ ಕಾಲೇಜ್ ನಲ್ಲಿ ಮಾನಗೇಡಿ ಕೃತ್ಯ

ಕೊನೆಗೆ ವೈದ್ಯರಿಂದಲೇ ಅನಾರೋಗ್ಯದ ನೋಟ್ ಬರೆಯಿಸಿಕೊಂಡ ಕಾತ್‌‌ಗೆ, “(ಉದ್ಯೋಗಿಯ ಹೆಸರು) ಅವರು ಸರ್ಜರಿಗೆ ಆಗಮಿಸಿದ್ದರು. ಏಕೆಂದರೆ ಆಕೆಯ ಮ್ಯಾನೇಜರ್‌ ಹೀಗೆ ಮಾಡಲು ಸೂಚಿಸಿದ್ದರು. ಅನಾರೋಗ್ಯದ ವಿಚಾರವನ್ನು ಎಲ್ಲಾ ಉದ್ಯೋಗಿಗಳು ಸ್ವಯಂ ಪ್ರಮಾಣೀಕರಿಸಲು ಇಂಗ್ಲೆಂಡ್‌ನಲ್ಲಿ ಅವಕಾಶವಿದ್ದರೂ ಹೀಗೆ ಮಾಡುವುದು ಅನಧಿಕೃತ ನಡೆ. ಹೀಗೆ ಅನಗತ್ಯವಾಗಿ ಕಚೇರಿಗೆ ಬರಲು ತಿಳಿಸಿದ್ದ ಕಾರಣದಿಂದ ರೋಗಿಗೆ ಜ್ವರ ಹೆಚ್ಚಾಗಿದ್ದು, 30 ಡಿಗ್ರೀ ಸೆಲ್ಷಿಯಸ್ ತಲುಪಿದೆ. ಆಕೆಗೆ ಚೇತರಿಸಿಕೊಳ್ಳಲು ಎರಡು ವಾರಗಳ ರಜೆ ನೀಡಬೇಕೆಂದು ನಾನು ಸಹಿ ಮಾಡುತ್ತಿದ್ದೇನೆ,” ಎಂದು ವೈದ್ಯರು ಬರೆದಿದ್ದಾರೆ.

“ಕಾನೂನಿನ ಪ್ರಕಾರ ಈ ಉದ್ಯೋಗಿಗೆ ಸ್ವಯಂ ಪ್ರಮಾಣೀಕರಿಸಿಕೊಳ್ಳಲು ಅವಕಾಶ ಕೊಟ್ಟಿದ್ದರೆ ಆಕೆಗೆ ಚೇತರಿಸಿಕೊಳ್ಳಲು ಕೆಲವೇ ದಿನಗಳು ಸಾಕಾಗುತ್ತಿದ್ದವು. ಆದರೆ ಹೀಗೆ ಆಕೆಯನ್ನು ದಣಿಸಿದ್ದ ಕಾರಣದಿಂದಾಗಿ ಆಕೆಗೆ ಚೇತರಿಸಿಕೊಳ್ಳಲು ಎರಡು ವಾರಗಳು ಬೇಕಿವೆ,” ಎಂದು ವೈದ್ಯರು ಬರೆದಿದ್ದಾರೆ.

ಈ ನೋಟ್‌ನಿಂದಾಗಿ ಕಾತ್‌ಳ ಬಾಸ್‌ ವಿರುದ್ಧ ಮೇಲ್ವಿಚಾರಣೆ ನಡೆಸಿದ್ದು, ಆತನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡು ವಾರ್ನಿಂಗ್ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...