
ಕೊಪ್ಪಳ ಜಿಲ್ಲೆ ಕುಟಗನಹಳ್ಳಿಯ ರೈತ ಕುಟುಂಬವೊಂದು ಬರೋಬ್ಬರಿ 151 ಬೋರ್ ವೆಲ್ ಕೊರೆಸಿದ ನಂತರ ನೀರು ಸಿಕ್ಕಿದೆ. 151 ನೇ ಬೋರ್ವೆಲ್ ನಲ್ಲಿ 100 ಅಡಿಗೆ ನೀರು ಬಂದಿದೆ.
ಅಶೋಕ ಮೇಟಿ ಕುಟುಂಬದವರು, ಸಂಬಂಧಿಕರು ಸೇರಿ 24 ಎಕರೆ ಜಮೀನು ಹೊಂದಿದ್ದು, ಜಮೀನಿಗೆ ನೀರು ಸೌಲಭ್ಯ ಕಲ್ಪಿಸಲು 15 ವರ್ಷದಿಂದ 150 ಬೋರ್ ವೆಲ್ ಕೊರೆಸಲಾಗಿದೆ. ಆದರೆ, ನೀರು ಸಿಕ್ಕಿರಲಿಲ್ಲ. ಮನೆಯ ಸಮೀಪವೇ ಬೋರ್ವೆಲ್ ಕೊರೆಸಿ 1.5 ಕಿಲೋ ಮೀಟರ್ ದೂರದ ಜಮೀನಿಗೆ ನೀರು ತರಲಾಗಿತ್ತು.
ಬೋರ್ವೆಲ್ ಕೊರೆಸುವ ಪ್ರಯತ್ನವನ್ನು ಕುಟುಂಬದವರು ಕೈಬಿಟ್ಟಿರಲಿಲ್ಲ. ಸತತ 15 ವರ್ಷದ 150 ಬೋರ್ ವೆಲ್ ಕೊರೆಸಿದ್ದರೂ, ಬಾರದ ನೀರು ಕೊನೆಗೂ ಸಿಕ್ಕಿದೆ. ಭಾನುವಾರ ರಾತ್ರಿ 151 ನೇ ಬೋರ್ವೆಲ್ ಕೊರೆಸುವಾಗ 100 ಅಡಿಗೆ ನೀರು ಬಂದಿದೆ. ಇದರಿಂದಾಗಿ ಕುಟುಂಬದವರಿಗೆ ಖುಷಿಯಾಗಿದೆ.