ಬೆಂಗಳೂರು: ಗಂಗಾ ಕಲ್ಯಾಣ ಯೋಜನೆ ಕೊಳವೆ ಬಾವಿ ಕಾಮಗಾರಿ ಕೈಗೊಳ್ಳಲು ಕರೆದಿರುವ ಟೆಂಡರ್ ರದ್ದುಪಡಿಸಿ ಮರು ಟೆಂಡರ್ ಕರೆಯಬೇಕು ಎಂದು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಬೋರ್ವೆಲ್ ಗುತ್ತಿಗೆದಾರರ ಸಂಘ ಒತ್ತಾಯಿಸಿದೆ.
ಕೊಳವೆ ಬಾವಿ ಕಾಮಗಾರಿ ಕೈಗೊಳ್ಳಲು ಕರೆದಿರುವ ಟೆಂಡರ್ ನಲ್ಲಿ ಅರ್ಜಿ ಸಲ್ಲಿಕೆಗೆ ನಿಗದಿ ಮಾಡಿದ ಮಾನದಂಡ ಅನ್ಯ ರಾಜ್ಯದವರು ಸೇರಿ ಕೆಲವು ದೊಡ್ಡ ಗುತ್ತಿಗೆದಾರರಿಗೆ ಮಾತ್ರ ಅನುಕೂಲ ಮಾಡಿಕೊಡುವಂತಿದೆ. ಸರ್ಕಾರ ಇದನ್ನು ರದ್ದುಪಡಿಸಿ ಮರು ಟೆಂಡರ್ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2022 -23ನೇ ಸಾಲಿನಲ್ಲಿ 2020 ರಿಂದ 2023ರ ವರೆಗಿನ ಅವಧಿಯ ಗಂಗಾ ಕಲ್ಯಾಣ ಯೋಜನೆ ಸುಮಾರು 10,000 ಕೊಳವೆ ಬಾವಿ ಕೊರೆಯಲು ಟೆಂಡರ್ ಕರೆದು 12 ತಿಂಗಳ ಅವಧಿ ಕಾಮಗಾರಿಯ ಕರಾರು ಮಾಡಿಕೊಂಡಿತ್ತು. ಆದರೆ, ಹೊಸ ಸರ್ಕಾರ ಹಿಂದಿನ ಎಲ್ಲಾ ಕಾಮಗಾರಿ ತಡೆ ಹಿಡಿದಿದೆ. ನಮಗೆ ಕಾಮಗಾರಿ ಅವಕಾಶ ಇದ್ದರೂ ಸರ್ಕಾರ ಅವಧಿ ವಿಸ್ತರಿಸಿಲ್ಲ. 2000 ಕೊಳವೆ ಬಾವಿಗಳ ಬಿಲ್ ಪಾವತಿ ಮಾಡಿಲ್ಲ ಎಂದು ಹೇಳಿದ್ದಾರೆ.