ವಿಜಯಪುರ : ಬೋರ್ ವೆಲ್ ಲಾರಿ ಹರಿದು ತೋಟದ ಮಾಲೀಕ ದುರ್ಮರಣಕ್ಕೀಡಾದ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ತಳವಡದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಮೊಹಮದ್ ಕೊಲ್ಹಾರ ಎಂದು ಗುರುತಿಸಲಾಗಿದೆ. ಬೋರ್ ವೆಲ್ ಲಾರಿ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೊಹಮದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಕೂಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.