ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇನ್ನೊಂದೆಡೆ ಬೋರ್ ವೆಲ್ ಕೊರೆಸುವವರ ಸಂಖ್ಯೆ ಹೆಚ್ಚುತ್ತಿದೆ. ಈ ಮಧ್ಯೆ ಅಂತರ್ಜಲ ಮಟ್ಟ ಕುಸಿದಿರುವ ಹಿನ್ನೆಲೆಯಲ್ಲಿ ಬೇಕಾಬಿಟ್ಟಿಯಾಗಿ ಬೋರ್ ವೆಲ್ ಕೊರೆಸುವವರಿಗೆ ಜಲ ಮಂಡಳಿ ಬಿಗ್ ಶಾಕ್ ನೀಡಿದೆ.
ಬೋರ್ ವೆಲ್ ಕೊರೆಸಲು ಜಲ ಮಂದಳಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿ ಪಡೆದ ಸ್ಥಳದಲ್ಲಿ ಮಾತ್ರ ಬೋರ್ ವೆಲ್ ಕೊರೆಸಬೇಕು. ಅನುಮತಿ ಇಲ್ಲದೇ ಬೋರ್ ವೆಲ್ ಕೊರೆದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಅನುಮತಿಗಾಗಿ ಜಲ ಮಂಡಳಿ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಬಳಿಕ ಅನುಮತಿ ಸಿಕ್ಕಿದರೆ ಮಾತ್ರ ಬೋರ್ ವೆಕ್ ಕೊರೆಸಬಹುದು. ಈ ನಿಮಯ ಮಾಅರ್ಚ್ 15ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.