
ಬಾಲಿವುಡ್ ನಟ ರಣವೀರ್ ಸಿಂಗ್ ಆಗಾಗ್ಗೆ ವಿಶೇಷ ಕಾರಣಗಳಿಗೆ ಸುದ್ದಿಯಲ್ಲಿರುತ್ತಾರೆ. ಈಗ ಅವರು ಮುತ್ತಿಡುವ ವಿಡಿಯೋ ವೈರಲ್ ಆಗಿದ್ದು, ಮತ್ತೆ ಸದ್ದು ಮಾಡಿದ್ದಾರೆ.
ಅವರು ದೀಪಿಕಾ ಪಡುಕೋಣೆಗೆ ಮುತ್ತಿಟ್ಟಿದ್ದರೆ ಸುದ್ದಿಯಾಗುತ್ತಿರಲಿಲ್ಲವೇನೋ, ಅವರು ಜಂಗಲ್ ಕಿಂಗ್ ಬೇರ್ ಗ್ರಿಲ್ಸ್‌ಗೆ ಮುತ್ತಿಟ್ಟು ಗಮನ ಸೆಳೆದಿದ್ದಾರೆ.
ಕಾರ್ಯಕ್ರಮವೊಂದರ ವಿಡಿಯೋ ತುಣುಕು ವೈರಲ್ ಆಗಿದೆ. ಅದರಲ್ಲಿ ರಣವೀರ್ ಪದೇ ಪದೇ ಬೇರ್ ಗ್ರಿಲ್ಸ್ ಕೆನ್ನೆಗೆ ಮುತ್ತಿಡುತ್ತಿರುವುದನ್ನು ತೋರಿಸಲಾಗಿದೆ. ನೆಟ್ಟಿಗರು ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡು ಉಲ್ಲಾಸಮಯ ಕಾಮೆಂಟರಿ ಕೂಡ ಮಾಡಿದ್ದಾರೆ.
ಒಂದೇ ಒಂದು ‘ಕೊರೊನಾ’ ಪ್ರಕರಣ ಪತ್ತೆಯಾಗಿದ್ದಕ್ಕೆ ಇಡೀ ನಗರವೇ ಲಾಕ್ ಡೌನ್…!
ಬೇರ್ ಗ್ರಿಲ್ಸ್ ಜೊತೆಗಿನ ಅಡ್ವೆಂಚರ್ ಶೋ ಪ್ರೇಕ್ಷಕರಿಂದ ಹೆಚ್ಚಾಗಿ ಸಕಾರಾತ್ಮಕ ಪ್ರತಿಕ್ರಿಯೆ ಸ್ವೀಕರಿಸಿದ್ದು, ರಣವೀರ್ ತನ್ನ ಅಭಿಮಾನಿಗಳಿಗೆ ಕಾರ್ಯಕ್ರಮವನ್ನು ಇಷ್ಟಪಟ್ಟಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇದೇ ವೇಳೆ ನೆಟ್ಟಿಗರು ಆ ಶೋನ ರಣವೀರ್ ಸಿಂಗ್ ಅವರ ಸ್ಟಿಲ್‌ಗಳೊಂದಿಗೆ ಮೆಮೆ ಮಾಡಿ ಖುಷಿ ಹಂಚಿಕೊಂಡಿದ್ದಾರೆ.
ಬೇರ್ ಗ್ರಿಲ್ಸ್‌ನೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿರುವ ರಣವೀರ್, ಬೇರ್ ಗ್ರಿಲ್ಸ್ ಜಂಗಲ್ ಕಿಂಗ್, ಆತ ಬದುಕುಳಿಯುವ ಆಟದ ಫೈನಲ್ ಮಾಸ್ಟರ್. ಅವನಿಂದ ಕಲಿಯಲು ತುಂಬಾ ಇದೆ ಎಂದು ಹೇಳಿಕೊಂಡಿದ್ದಾರೆ.