alex Certify BIG NEWS: ವಿದೇಶಕ್ಕೆ ಹೋಗುವವರಿಗೆ ಅವಧಿಗೆ ಮುನ್ನವೇ ಬೂಸ್ಟರ್ ಡೋಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿದೇಶಕ್ಕೆ ಹೋಗುವವರಿಗೆ ಅವಧಿಗೆ ಮುನ್ನವೇ ಬೂಸ್ಟರ್ ಡೋಸ್

ಇನ್ನು ಮುಂದೆ ವಿದೇಶಕ್ಕೆ ತೆರಳುವವರಿಗೆ ಬೂಸ್ಟರ್ ಡೋಸ್ ಅವಧಿಗೆ ಮುನ್ನವೇ ದೊರೆಯಲಿದೆ. ಈ ಹಿಂದೆ ಎರಡನೇ ಡೋಸ್ ಪಡೆದ 9 ತಿಂಗಳ ನಂತರವಷ್ಟೇ ಬೂಸ್ಟರ್ ಡೋಸ್ ನೀಡಲಾಗುತ್ತಿತ್ತು.

ಆದರೆ, ಇದೀಗ ಕೇಂದ್ರ ಸರ್ಕಾರ ಈ ನಿಯಮವನ್ನು ಸಡಿಲಿಸಿದ್ದು, 9 ತಿಂಗಳಿಗೆ ಮುನ್ನವೇ ಬೂಸ್ಟರ್ ಡೋಸ್ ಪಡೆದುಕೊಳ್ಳಲು ಅವಕಾಶ ಕಲ್ಪಿಸಿದೆ. ಕೋವಿನ್ ಪೋರ್ಟಲ್ ನಲ್ಲಿ ಸದ್ಯದಲ್ಲೇ ಈ ಬೂಸ್ಟರ್ ಡೋಸ್ ಗೆ ನೋಂದಣಿ ಮಾಡಿಕೊಳ್ಳುವ ಸೇವೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ.

BIG NEWS: ಕುತೂಹಲಕ್ಕೆ ಕಾರಣವಾಯ್ತು BSY ಜೊತೆಗಿನ ಬಸವರಾಜ ಬೊಮ್ಮಾಯಿ ಭೇಟಿ

ಇತ್ತೀಚೆಗೆ ಸಭೆ ಸೇರಿದ್ದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯು, ಎರಡನೇ ಡೋಸ್ ನಂತರ ಬೂಸ್ಟರ್ ಡೋಸ್ ಪಡೆಯಲು 9 ತಿಂಗಳಾಗಬೇಕೆಂದು ಮಾಡಿರುವ ನಿಯಮದಿಂದ ವಿದೇಶಕ್ಕೆ ತೆರಳುವವರು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ನಿಯಮವನ್ನು ಸಡಿಲಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅವಧಿಯ ನಿಯಮವನ್ನು ಸಡಿಲಿಸಲಿದೆ ಎಂದು ಮಾಂಡವೀಯ ಟ್ವೀಟ್ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...