ನವದೆಹಲಿ: ಭಾರತದಲ್ಲಿ ಬೂಸ್ಟರ್ ಡೋಸ್ ಕೊರೋನಾ ಲಸಿಕೆ ನೀಡುವ ಸಂಬಂಧ ಇಂದು ಮಹತ್ವದ NTAGI ಸಭೆ ನಡೆಸಲಾಗುತ್ತದೆ.
ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ತಂಡದ(NTAGI) ಸಭೆಯಲ್ಲಿ ಬೂಸ್ಟರ್ ಡೋಸ್ ಲಸಿಕೆ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಡಾ. ಎನ್.ಕೆ. ಅರೋರಾ ನೇತೃತ್ವದ ಸಭೆಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಮತ್ತು ಫ್ರಂಟ್ಲೈನ್ ವರ್ಕರ್ಸ್ ಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.
ಕೇಂದ್ರ ಸರ್ಕಾರ ಬೂಸ್ಟರ್ ಲಸಿಕೆ ನೀಡಿಕೆ ಬಗ್ಗೆ ತಜ್ಞರ ತಂಡವು ತೀರ್ಮಾನ ಕೈಗೊಳ್ಳಲಿ ಎಂದು ಹೇಳಿರುವುದರಿಂದ ಇಂದು ನಡೆಯಲಿರುವ ಸಭೆಯಲ್ಲಿ ಈ ಕುರಿತಾಗಿ ನಿರ್ಧಾರ ಕೈಗೊಳ್ಳಲಲಾಗುವುದು.
ಇದೇ ವೇಳೆ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ. ಅಮೆರಿಕ, ಇಂಗ್ಲೆಂಡ್, ಇಸ್ರೇಲ್ ನಲ್ಲಿ ಬೂಸ್ಟರ್ ಡೋಸ್ ನೀಡಲಾಗಿದೆ. ಭಾರತದಲ್ಲಿ ಹೆಚ್ಚಿನ ಕೊರೋನಾ ಲಸಿಕೆ ದಾಸ್ತಾನು ಇದ್ದರೂ ಕೂಡ ಬೂಸ್ಟರ್ ಡೋಸ್ ನೀಡಿಲ್ಲ. ಅನೇಕ ರಾಜ್ಯಗಳು ಬೂಸ್ಟರ್ ಡೋಸ್ ನೀಡುವ ಬಗ್ಗೆ ಅನುಮತಿ ಕೋರಿವೆ.