ನವದೆಹಲಿ: ಪ್ರಸ್ತುತ ಬೂಸ್ಟರ್ ಡೋಸ್ ಗಳ ಅಗತ್ಯವಿರುತ್ತದೆ ಎಂದು ದೆಹಲಿಯ ಏಮ್ಸ್ ಕೋವಿಡ್ ಟಾಸ್ಕ್ ಫೋರ್ಸ್ನ ಅಧ್ಯಕ್ಷ ಡಾ ನವೀತ್ ವಿಗ್ ಹೇಳಿದ್ದಾರೆ.
ವಿವಿಧ ವಯೋಮಿತಿಯವರ ಮೇಲೆ ಮತ್ತು ವಿವಿಧ ರೋಗಿಗಳ ಮೇಲೆ ತಕ್ಷಣದ ಪರಿಣಾಮದ ಅಧ್ಯಯನಗಳ ಅಗತ್ಯವಿದೆ ಎಂದ ಅವರು, ಇಸ್ರೇಲ್ನಲ್ಲಿ ಬೂಸ್ಟರ್ ಡೋಸ್ ನಂತರ ಲಸಿಕೆ ಪರಿಣಾಮಕಾರಿತ್ವವು ಶೇಕಡ 40 ರಿಂದ 93 ಕ್ಕೆ ಏರಿದೆ ಎಂದು ತಿಳಿಸಿದ್ದಾರೆ.
ಕೊರೋನಾ ಹೊಸ ರೂಪಾಂತರ ಹೆಚ್ಚು ಪರಿಣಾಮಕಾರಿಯಾಗಿ ವೇಗವಾಗಿ ಹರಡಬಲ್ಲದು ಎಂದು ಹೇಳಲಾಗಿದೆ. ಇಂತಹ ಹೊಸ ರೂಪಾಂತರಗಳು ಬರುತ್ತಲೇ ಇರುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇದಕ್ಕಾಗಿ ಯುನಿವರ್ಸಲ್ ಲಸಿಕೆ ಅತ್ಯಂತ ಪ್ರಮುಖವಾಗಿದೆ: ಪ್ರತಿಕಾಯಗಳೊಂದಿಗೆ ವೈರಸ್ ನಿಯಂತ್ರಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.