
ಸತ್ವಪೂರ್ಣ ಉಪಹಾರದ ಸೇವನೆ ಮೂಲಕ ಬೆಳಗ್ಗೆಯನ್ನು ಆರಂಭಿಸಿದರೆ ನಿಮ್ಮ ಇಡೀ ದಿನ ಉಲ್ಲಾಸಮಯವಾಗಿರುತ್ತದೆ ಎಂದು ಬಿಡಿಸಿ ಹೇಳಬೇಕಿಲ್ಲ ಅಲ್ಲವೇ? ನಿಮ್ಮ ಉಪಹಾರದಲ್ಲಿ ಪೋಷಕಾಂಶಗಳ ವರ್ಧನೆಗಾಗಿ ಸೇರಿಸಬಹುದಾದ ಆರೋಗ್ಯಕರವಾದ ಒಂದಿಷ್ಟ ಆಯ್ಕೆಗಳು ಇಲ್ಲಿವೆ ನೋಡಿ.
1. ತರಕಾರಿ ಓಟ್‌ಮೀಲ್
ಸಾಕಷ್ಟು ನಾರಿನಂಶ ಇರುವ ಓಟ್‌ಮೀಲ್ ಒಂದು ಸೂಪರ್‌ಫುಡ್ ಆಗಿದೆ. ಇದನ್ನು ನಿಮ್ಮ ಉಪಹಾರದಲ್ಲಿ ಸೇರಿಸಿದಲ್ಲಿ, ನೀವು ಸುಲಭವಾಗಿ ನಿಮ್ಮ ಪಾಲಿನ ಪ್ರೋಟೀನ್, ನಾರಿನಂಶ, ವಿಟಮಿನ್‌ಗಳನ್ನು ದೇಹಕ್ಕೆ ಪಡೆಯಬಹುದಾಗಿದೆ. ಇದಕ್ಕೆ ತರಕಾರಿಗಳನ್ನು ಸೇರಿಸುವುದರಿಂದ ಉಪಹಾರವನ್ನು ಇನ್ನಷ್ಟು ಆರೋಗ್ಯಕರವಾಗಿ ಮಾಡಬಹುದು.
2. ಮೊಳಕೆ ಕಾಳುಗಳು
ಹೆಸರುಕಾಳನ್ನು ಮೊಳಕೆಬರಿಸಿ ತಿನ್ನುವುದರಿಂದ ತೂಕ ಇಳಿಸಿಕೊಳ್ಳಲು ನೆರವಾಗಲಿದೆ. ಈ ಧವಸಗಳು ಸ್ನಾಯುಗಳ ಬೆಳವಣಿಗೆಗೆ ನೆರವಾಗಿ, ಬುದ್ಧಿಮತ್ತೆ ವರ್ಧಿಸಿ ದಿನವಿಡೀ ಚೈತನ್ಯಮಯವಾಗಿರಲು ನೆರವಾಗುತ್ತದೆ. ನೀವು ಈ ಕಾಳುಗಳನ್ನು ಬೇಯಿಸಿ ಈರುಳ್ಳಿ ಮತ್ತು ಮಸಾಲೆಗಳೊಂದಿಗೆ ಬೆರೆಸಬಹುದಾಗಿದೆ. ಇದರಲ್ಲಿ ಸಾಕಷ್ಟು ನಾರಿನಂಶ, ಖನಿಜಾಂಶಗಳು ಮತ್ತು ವಿಟಮಿನ್‌ಗಳು ಇರಲಿವೆ.
3. ಬೇಯಿಸಿದ ಮೊಟ್ಟೆ
ಪ್ರತಿ ದಿನ ಬೆಳಿಗ್ಗೆ ನೀವು ಮೊಟ್ಟೆ ಸೇವಿಸಿದಲ್ಲಿ, ನಿಮ್ಮ ದೇಹವನ್ನು ದಿನವಿಡೀ ಪೋಷಕಾಂಶಗಳಿಂದ ಭರಿಸಬಹುದಾಗಿದೆ. ಮೊಟ್ಟೆಗಳು ವಿಟಮಿನ್‌ಗಳು ಮತ್ತು ಒಮೆಗಾ-3 ಕೊಬ್ಬಿನ ಆಸಿಡ್‌ಗಳನ್ನು ಹೊಂದಿವೆ.
4. ಓಟ್ಸ್
ಓಟ್ಸ್‌ಗಳಲ್ಲಿ ಒಳ್ಳೆಯ ಮಟ್ಟದಲ್ಲಿ ನಾರಿನಂಶವಿದ್ದು, ದೇಹದ ಅಷ್ಟೂ ಕ್ರಿಯೆಗಳನ್ನು ಚುರುಕುಗೊಳಿಸಿ ಕ್ಯಾಲೊರಿಗಳನ್ನು ಸುಲಭದಲ್ಲಿ ಸುಟ್ಟು ಹಾಕಲು ನೆರವಾಗುತ್ತವೆ. ಈ ಮೂಲಕ ನೀವು ಫಿಟ್ ಆಗಿರಲು ಸಹಾಯವಾಗುತ್ತದೆ.
5. ಕಾಲಕಾಲಿಕ ಹಣ್ಣುಗಳು
ಖನಿಜಾಂಶಗಳು, ನಂಜುನಿರೋಧಕಗಳು ಮತ್ತು ವಿಟಮಿನ್‌ಗಳ ಆಗರವಾದ ಹಣ್ಣುಗಳಿಂದ ನಿಮ್ಮ ದೇಹದ ಪೋಷಕಾಂಶಗಳ ಅಗತ್ಯಗಳು ಪೂರ್ಣಗೊಳ್ಳುತ್ತವೆ. ಇವುಗಳಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇವುಗಳೊಂದಿಗೆ ಸಿಟ್ರಿಕ್ ಹಣ್ಣುಗಳ ಸೇವನೆಯಿಂದ ಕ್ಯಾಲೊರಿಗಳನ್ನು ಸುಟ್ಟು ಹಾಕಿ, ತೂಕ ಇಳಿಸಲು ನೆರವಾಗುತ್ತದೆ.