alex Certify ಗುಡ್​ ನ್ಯೂಸ್​ : ಕೊವ್ಯಾಕ್ಸಿನ್​ ಲಸಿಕೆಗಳಿಗೆ ಆಸ್ಟ್ರೇಲಿಯಾದಲ್ಲಿ ಹಸಿರು ನಿಶಾನೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್​ ನ್ಯೂಸ್​ : ಕೊವ್ಯಾಕ್ಸಿನ್​ ಲಸಿಕೆಗಳಿಗೆ ಆಸ್ಟ್ರೇಲಿಯಾದಲ್ಲಿ ಹಸಿರು ನಿಶಾನೆ..!

ಭಾರತದ ಕೋವಿಡ್​ 19 ಲಸಿಕೆ ಅಭಿಯಾನಕ್ಕೆ ಆಸ್ಟ್ರೇಲಿಯಾದಲ್ಲಿ ಭರ್ಜರಿ ಮುನ್ನಡೆ ದೊರಕಿದೆ. ಆಸ್ಟ್ರೇಲಿಯಾವು ಭಾರತ್​ ಬಯೋಟೆಕ್​ ನಿರ್ಮಿತ ಕೊವ್ಯಾಕ್ಸಿನ್​ ಲಸಿಕೆಗೆ ಗ್ರೀನ್​ ಸಿಗ್ನಲ್​ ನೀಡಿದೆ.

ಕೊವ್ಯಾಕ್ಸಿನ್​ ಲಸಿಕೆ ಜಾಗತಿಕ ಬಳಕೆಗೆ ಪ್ರವೇಶ ನೀಡುವ ಬಗ್ಗೆ ಇನ್ನಷ್ಟು ದಾಖಲೆಗಳನ್ನು ಸಲ್ಲಿಸಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಭಾರತ್​ ಬಯೋಟೆಕ್​​ಗೆ ಹೇಳಿರುವುದರ ನಡುವೆಯೇ ಆಸ್ಟ್ರೇಲಿಯಾ ಕೊವ್ಯಾಕ್ಸಿನ್​ ಲಸಿಕೆಗಳಿಗೆ ಹಸಿರು ನಿಶಾನೆ ತೋರಿದೆ.

ಭಾರತದ ಸ್ವದೇಶಿ ನಿರ್ಮಿತ ಕೊವ್ಯಾಕ್ಸಿನ್​ ಲಸಿಕೆಗಳಿಗೆ ತುರ್ತು ಅನುಮೋದನೆ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಮಾಡಲಾಗಿತ್ತು. ಈ ಸಂಬಂಧ ತಾಂತ್ರಿಕ ಸಲಹಾ ಸಮಿತಿ ಕರೆದಿದ್ದ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಲು ಇನ್ನಷ್ಟು ವಿವರಣೆ ನೀಡುವಂತೆ ಸೂಚನೆ ನೀಡಿತ್ತು. ಭಾರತ್​ ಬಯೋಟೆಕ್​​ ಲಸಿಕೆಯ ಅಂತಿಮ ಮೌಲ್ಯಮಾಪನಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ನವೆಂಬರ್​ 3ರಂದು ಸಭೆ ನಡೆಸಲಿದೆ.

ಐಸಿಎಂಆರ್​ ಸಹಭಾಗಿತ್ವದಲ್ಲಿ ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಔಷಧಿ ತಯಾರಕ ಕಂಪನಿಯು ಕೋವಿಡ್​ 19 ಸೋಂಕಿನ ವಿರುದ್ಧ ಕೊವ್ಯಾಕ್ಸಿನ್​ ಲಸಿಕೆಯನ್ನು ಸಿದ್ಧಪಡಿಸಿತ್ತು. ಈ ಸಂಬಂಧ ತುರ್ತು ಅನುಮೋದನೆಗೆ ಕೋರಿ ಏಪ್ರಿಲ್​ 19ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಅರ್ಜಿ ಸಲ್ಲಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...