
ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆಯಾಗ್ತಿದೆ. ಕೊರೊನಾ ಲಸಿಕೆ ಹಾಗೂ ಕೊರೊನಾಕ್ಕೆ ಹೆಚ್ಚಿನ ಚಿಕಿತ್ಸೆ ಲಭ್ಯವಿರುವ ಕಾರಣ, ಕೊರೊನಾ ಮೂರನೇ ಅಲೆ ಭಯದಲ್ಲಿಯೇ ಜನರು ಹೊರಗೆ ಬರ್ತಿದ್ದಾರೆ. ಕೊರೊನಾ ನಂತ್ರ ಜನರು, ಪ್ರವಾಸಕ್ಕೆ ತೆರಳುವುದು ಹೆಚ್ಚಾಗಿದೆ.
ಥಾಮಸ್ ಕುಕ್ ಇಂಡಿಯಾ, ದೇಶದ ಯಾವ ರಾಜ್ಯದ ಜನರು ಹೆಚ್ಚೆಚ್ಚು ಪ್ರವಾಸಕ್ಕೆ ಹೋಗ್ತಿದ್ದಾರೆ ಎಂಬ ಮಾಹಿತಿ ಬಿಚ್ಚಿಟ್ಟಿದೆ. ಇದ್ರ ಪ್ರಕಾರ, ಪ್ರವಾಸಕ್ಕೆ ಹೋಗ್ತಿರುವವರಲ್ಲಿ ಕರ್ನಾಟಕದವರು ಮುಂದಿದ್ದಾರೆ. ಹೌದು, ಕರ್ನಾಟಕದ ಜನ ಕೊರೊನಾ ಭಯದಿಂದ ಹೊರ ಬಂದು, ಪ್ರವಾಸಕ್ಕೆ ಪ್ಲಾನ್ ಮಾಡ್ತಿದ್ದಾರೆ. ಲಾಕ್ ಡೌನ್, ಕೊರೊನಾ ವೇಳೆ ಮನೆಯಲ್ಲಿದ್ದ ಜನರು, ಚೇಂಜ್ ಬಯಸ್ತಿದ್ದಾರೆ.
ಟೆಸ್ಲಾ ಸಿಇಒ ಬಳಿಯಿದೆ ಪಾಕಿಸ್ತಾನದ ಒಟ್ಟಾರೆ ಜಿಡಿಪಿಗಿಂತಲೂ ಹೆಚ್ಚು ಹಣ…!
ಕಂಪನಿಯ ಪ್ರಕಾರ, ಹಬ್ಬ ಹಾಗೂ ಚಳಿಗಾಲದ ರಜೆಯಲ್ಲಿ ಜನರು ಪ್ರವಾಸಕ್ಕೆ ಪ್ಲಾನ್ ಮಾಡ್ತಿದ್ದಾರೆ. ಬುಕ್ಕಿಂಗ್ ಹೆಚ್ಚಾಗ್ತಿದೆ. ಬುಕ್ಕಿಂಗ್ ವಿಷ್ಯದಲ್ಲಿ ಬೆಂಗಳೂರಿಗರು ಮುಂದಿದ್ದಾರೆ. ಕಂಪನಿಯ ವ್ಯವಹಾರವು ನಂತ್ರ ಶೇಕಡಾ 55ರಷ್ಟು ಚೇತರಿಕೆ ಕಂಡಿದೆ. ಒಟ್ಟು ಬುಕಿಂಗ್‌ನಲ್ಲಿ ಶೇಕಡಾ 72ರಷ್ಟು ಬುಕ್ಕಿಂಗ್ ಬೆಂಗಳೂರಿನಿಂದ ಬರ್ತಿದೆಯಂತೆ. ಜನರು ಹೊಸ ಹೊಸ ಸ್ಥಳಗಳಿಗೆ ಹೋಗಲು ಬಯಸ್ತಿದ್ದಾರೆ. ಕರ್ನಾಟಕದ ಜನ, ಕಡಿಮೆ ಬಜೆಟ್ ನಲ್ಲಿ ಭಾರತದ ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಆದ್ಯತೆ ನೀಡ್ತಿದ್ದಾರೆ. ಇದಲ್ಲದೆ, ಮಾಲ್ಡೀವ್ಸ್, ಟರ್ಕಿ, ಯುರೋಪ್ ಮತ್ತು ದುಬೈಗೂ ಜನರು ಪ್ರವಾಸದ ಪ್ಲಾನ್ ಮಾಡ್ತಿದ್ದಾರೆ. ಕುಟುಂಬಸ್ಥರ ಜೊತೆ ಕೆಲವರು ಪ್ರವಾಸಕ್ಕೆ ಹೋದ್ರೆ,ಮತ್ತೆ ಕೆಲವರು ಸಹೋದ್ಯೋಗಿಗಳ ಜೊತೆ ಪ್ರವಾಸದ ಪ್ಲಾನ್ ಮಾಡ್ತಿದ್ದಾರೆ.