ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬುಕಿಂಗ್ ವ್ಯವಸ್ಥೆ ಆರಂಭಿಸಿರುವ ಓಲಾ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ವಿನೂತನ ಸೇವೆ ನೀಡಲು ಮುಂದಾಗಿದೆ.
ಓಲಾ ತಮಿಳು ನಾಡಿನಲ್ಲಿರುವ ತನ್ನ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕ ಫ್ಯೂಚರ್‌ಫ್ಯಾಕ್ಟರಿಯ ಸಾಮರ್ಥ್ಯ ಹೆಚ್ಚಳ ಮಾಡಿಕೊಂಡಿದೆ. ವಾರ್ಷಿಕ ಹತ್ತು ದಶಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಉತ್ಪಾದನೆ ಮಾಡುವ ಉದ್ದೇಶವನ್ನು ಓಲಾ ಇಟ್ಟುಕೊಂಡಿದ್ದು, ಇದೊಂದೇ ಕಾರ್ಖಾನೆಯಿಂದ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನೆಯ ಗುರಿ ಇಟ್ಟುಕೊಂಡಿದೆ.
ಸದ್ಯ 499 ರೂಪಾಯಿ ಕೊಟ್ಟು ನೀವೂ ಸಹ ಓಲಾ ಸ್ಕೂಟರ್ ಒಂದನ್ನು ಬುಕ್ ಮಾಡಬಹುದಾಗಿದ್ದು, ಒಂದು ವೇಳೆ ಬುಕಿಂಗ್ ಕ್ಯಾನ್ಸಲ್ ಮಾಡಿದಲ್ಲಿ ಆ ದುಡ್ಡು ಮರಳಿ ಕೊಡಲಾಗುವುದು. ಮೊದಲು ಬುಕ್ ಮಾಡುವವರಿಗೆ ಆದ್ಯತೆ ಮೇಲೆ ಡೆಲಿವರಿ ಮಾಡುವುದಾಗಿ ಓಲಾ ತಿಳಿಸಿದೆ.
ಟ್ವಿಟರ್ ಬಳಕೆದಾರರಿಗೆ ಗುಡ್ ನ್ಯೂಸ್: ಬಹುಬೇಡಿಕೆಯ ಸೌಲಭ್ಯ ಕೊನೆಗೂ ಜಾರಿ
ಕೇವಲ 18 ನಿಮಿಷಗಳಲ್ಲಿ ಸ್ಕೂಟರ್ ಬ್ಯಾಟರಿಯ 50%ನಷ್ಟು ಚಾರ್ಜ್ ಮಾಡಬಹುದಾಗಿದ್ದು, ಇಷ್ಟು ಶಕ್ತಿಯಲ್ಲೇ 75 ಕಿಮೀ ಚಲಿಸಬಹುದಾಗಿದೆ ಎಂದು ಓಲಾ ತಿಳಿಸುತ್ತದೆ. ಒಮ್ಮೆ ಬ್ಯಾಟರಿ ಪೂರ್ಣ ಚಾರ್ಜ್ ಮಾಡಿದರೆ ಓಲಾದ ಸ್ಕೂಟರ್ 150 ಕಿಮೀ ಚಲಿಸಬಲ್ಲದು.
ಪೂರ್ಣ ಎಲ್‌ಇಡಿ ಲೈಟಿಂಗ್, ವೇಗದ ಚಾರ್ಜಿಂಗ್, ಮುಂದಿನ ಚಕ್ರಕ್ಕೆ ಡಿಸ್ಕ್ ಬ್ರೇಕ್ ಸೇರಿದಂತೆ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರುವ ಓಲಾ ಸ್ಕೂಟರ್ ಲಿಥಿಯಮ್ ಅಯಾನ್ ಬ್ಯಾಟರಿ ಚಾಲಿತವಾಗಿದ್ದು, ಬಹುಲೋಹದ ಚಕ್ರಗಳು, ಟೆಲಿಸ್ಕೋಪಿಕ್ ಸಸ್ಪೆನ್ಶನ್‌ಗಳಂಥ ಆಕರ್ಷಕ ಫೀಚರ್‌ಗಳನ್ನು ಹೊಂದಿದೆ.
ತನ್ನ ಸ್ಕೂಟರ್‌ಗಳಿಗೆ ವಿದ್ಯುತ್ತಿನ ಇಂಧನ ಪೂರೈಕೆ ಮಾಡಲೆಂದು ಎಲ್ಲೆಡೆ ಹೈಪರ್ ಚಾರ್ಜಿಂಗ್ ಜಾಲವನ್ನು ತೆರೆಯುವುದಾಗಿ ಓಲಾ ತಿಳಿಸಿದೆ. ಯೋಜನೆಯ ಮೊದಲ ಹಂತದಲ್ಲಿ ಜಗತ್ತಿನಾದ್ಯಂತ 400 ನಗರಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣಕ್ಕೆ ಓಲಾ ಪ್ಲಾನ್ ಇಟ್ಟುಕೊಂಡಿದೆ.