ಕಳೆದ ಕೆಲ ತಿಂಗಳುಗಳಿಂದ ಅಡುಗೆ ಅನಿಲ ಬೆಲೆಯು ಮತ್ತೆ ಹೆಚ್ಚಳವಾಗಿದೆ. ಆದರೆ ಕೆಲವೊಂದು ಅಪ್ಲಿಕೇಶನ್‌ಗಳ ಮೂಲಕ ಎಲ್‌ಪಿಜಿ ಖರೀದಿ ಮಾಡಿದಲ್ಲಿ ನಿಮಗೆ ಒಳ್ಳೆಯ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವಿದೆ. ಇತ್ತೀಚೆಗೆ ಪೇಟಿಎಂ ನಡೆಸುತ್ತಿದ್ದ ಆಫರ್ ಒಂದರ ಮೂಲಕ 14.2 ಕೆಜಿಯ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದಲ್ಲಿ, 800 ರೂಪಾಯಿವರೆಗೂ ನಿಮಗೆ ಕ್ಯಾಶ್‌ಬ್ಯಾಕ್ ಸಿಗುವ ಸಾಧ್ಯತೆ ಇತ್ತು.
ಪ್ರತಿದಿನ ಈ ಯೋಗಾಸನ ಮಾಡಿದರೆ ನಿಮ್ಮನ್ನು ಕಾಡಲ್ಲ ಕೂದಲುದುರುವ ಸಮಸ್ಯೆ
ಈಗ, ಪಾಕೆಟ್ಸ್ ಅಪ್ಲಿಕೇಶನ್ ಮೂಲಕ ಆನ್ಲೈನ್‌ನಲ್ಲಿ ಸಿಲಿಂಡರ್ ಬುಕ್ ಮಾಡಿದಲ್ಲಿ ನಿಮಗೆ 10%ವರೆಗೂ ಕ್ಯಾಶ್‌ಬ್ಯಾಕ್ ಸಿಗುವ ಸಾಧ್ಯತೆ ಇದೆ. ಐಸಿಐಸಿಯ ಬ್ಯಾಂಕ್ ಬೆಂಬಲಿತ ಅಪ್ಲಿಕೇಶನ್ ಆಗಿರುವ ಪಾಕೆಟ್ಸ್ ಮೂಲಕ 200 ರೂ. ಮೇಲ್ಪಟ್ಟ ಬಿಲ್ ಪಾವತಿ ಮಾಡುವಾಗ ಕ್ಯಾಶ್‌ಬ್ಯಾಕ್ ಅನ್ನು ಗ್ರಾಹಕರು ಪಡೆಯಬಹುದಾಗಿದೆ.
ಈ ಕ್ಯಾಶ್‌ಬ್ಯಾಕ್ ಪಡೆಯಲು ನೀವು ಯಾವುದೇ ಪ್ರೋಮೋ ಕೋಡ್ ಬಳಸಬೇಕಾದ ಅಗತ್ಯವಿಲ್ಲ. ತಿಂಗಳೊಂದರಲ್ಲಿ ಗರಿಷ್ಠ ಮೂರು ವ್ಯವಹಾರಗಳ ಮೇಲೆ ಪಾಕೆಟ್ಸ್ ಅಪ್ಲಿಕೇಶನ್ ಮೂಲಕ ಗ್ರಾಹಕರು ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಕ್ಯಾಶ್‌ಬ್ಯಾಕ್ ಅನ್ನು ಪಾಕೆಟ್ಸ್ ಅಪ್ಲಿಕೇಶನ್‌ನ ವಾಲೆಟ್‌ಗೆ ಕ್ರೆಡಿಟ್ ಮಾಡಲಾಗುವುದು.