ಕಾಬೂಲ್: ತಾಲಿಬಾನ್ ಉಗ್ರರ ಆಕ್ರಮಣದಿಂದ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದು ಓಡಿಹೋಗಿ ಅರಾಜಕತೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ರಾಜಧಾನಿಯ ಹೋಟೆಲ್ ವೊಂದರಲ್ಲಿ ಸಿಲುಕಿರುವ ಭಾರತೀಯರೊಬ್ಬರು ನೆರವಿಗಾಗಿ ಮನವಿ ಮಾಡಿದ್ದಾರೆ.
ವಿಡಿಯೊ ಸಂದೇಶವನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿರುವ ಗುರು ನಾಯಕ್ ಅವರು, ತಾವು ಬುಕ್ ಮಾಡಿದ್ದ ಎರಡು ವಿಮಾನಗಳು ರದ್ದುಗೊಂಡಿವೆ ಎಂದಿದ್ದಾರೆ.
ಕಳೆದ 6 ವರ್ಷಗಳಿಂದ ನಾಯಕ್ ಅವರು ಅಫ್ಘಾನಿಸ್ತಾನದಲ್ಲಿನ ಎನ್ಜಿಒವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಬಿಕಿನಿ ಫೋಟೋ ಮೂಲಕ ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ ಮೌನಿ ರಾಯ್
ಇಷ್ಟು ಬೇಗ ತಾಲಿಬಾನಿಗಳ ಕೈವಶಕ್ಕೆ ರಾಷ್ಟ್ರವು ಜಾರುತ್ತದೆ ಎಂದು ತಿಳಿದಿರಲಿಲ್ಲ. ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದೇನೆ ಎಂದು ಅವರು ವಿಡಿಯೋದಲ್ಲಿ ಆತಂಕ ಹೊರಹಾಕಿದ್ದಾರೆ. ಏರ್ ಇಂಡಿಯಾ, ಕ್ಯಾಮ್ ಏರ್ ವಿಮಾನಯಾನ ಸಂಸ್ಥೆಗಳು ತಮ್ಮ ಟಿಕೆಟ್ ರದ್ದುಪಡಿಸಿವೆ ಎಂದಿದ್ದಾರೆ.