![](https://kannadadunia.com/wp-content/uploads/2021/11/thumb-sign-ink-bond-paper-mysuru.png)
ಮೈಸೂರು: ಆಸ್ತಿಗಾಗಿ ಹೆಣದ ಹೆಬ್ಬೆಟ್ಟು ಒತ್ತಿಸಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ. ಬಾಂಡ್ ಪೇಪರ್ ಗೆ ಮೃತಪಟ್ಟ ವೃದ್ಧೆಯ ಹೆಬ್ಬೆಟ್ಟನ್ನು ಖಾಲಿ ಬಾಂಡ್ ಪೇಪರ್ ಮೇಲೆ ಒತ್ತಿಸಿಕೊಳ್ಳಲಾಗಿದೆ.
ಮೈಸೂರಿನ ಶ್ರೀರಾಮಪುರದಲ್ಲಿ ಘಟನೆ ನಡೆದಿದೆ. ಮೃತ ದೇಹದಿಂದ ಹೆಬ್ಬೆಟ್ಟು ಒತ್ತಿಸಿಕೊಳ್ಳುವ ಸಂಬಂಧಿಕರ ಕೃತ್ಯದ ವಿಡಿಯೋವನ್ನು ಮಹಿಳೆಯೊಬ್ಬರು ಸೆರೆಹಿಡಿದಿದ್ದಾರೆ. ಘಟನೆ ನಡೆದ 11 ದಿನಗಳ ನಂತರ ವಿಡಿಯೋ ವೈರಲ್ ಆಗಿದೆ. ವಿಡಿಯೋ ಆದರಿಸಿ ವಿದ್ಯಾರಣ್ಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೈಸೂರಿನ ಶ್ರೀರಾಮಪುರದಲ್ಲಿ ಆಸ್ತಿಗಾಗಿ ಹೆಣದ ಹೆಬ್ಬೆಟ್ಟು ಸಹಿ ಪಡೆಯಲಾಗಿದೆ. ಮೃತಪಟ್ಟ ವೃದ್ಧೆ ಜಯಮ್ಮನವರಿಗೆ 14 ಎಕರೆ ಆಸ್ತಿ ಇದೆ. ಮದುವೆಯಾದ ಕೆಲ ದಿನಗಳ ನಂತರ ಅವರು ಪತಿಯಿಂದ ದೂರವಾಗಿದ್ದರು. ವೃದ್ಧ ಜಯಮ್ಮರ ಆಸ್ತಿ ಪಾಲು ಪಡೆಯಲು ಪತಿ ಬದುಕಿಲ್ಲ. ಮಕ್ಕಳು ಕೂಡ ಇಲ್ಲ.
ಜಯಮ್ಮರಿಗೆ ಇಬ್ಬರು ಅಕ್ಕಂದಿರು ಮತ್ತು ತಮ್ಮ ಇದ್ದಾರೆ. ಜಯಮ್ಮನ ಅಕ್ಕನ ಮಗ ನಾನೇ ಅವರನ್ನು ನೋಡಿಕೊಳ್ಳುತ್ತಿದ್ದೆ. ಅವರ ಆಸ್ತಿಯ ಹಕ್ಕು ನನಗಿದೆ ಎಂದು ಖಾಲಿ ಬಾಂಡ್ ಪೇಪರ್ ಮೇಲೆ ಹೆಣದ ಹೆಬ್ಬೆಟ್ಟು ಮುದ್ರೆ ಹಾಕಿಕೊಂಡಿದ್ದಾನೆ.