
ತನ್ನ ನೌಕರರ ಒಟ್ಟಾರೆ ವೇತನ ಹಾಗೂ ತುಟ್ಟಿ ಭತ್ಯೆಯಲ್ಲಿ ಹೆಚ್ಚಳ ಮಾಡಿರುವ ಉತ್ತರ ಪ್ರದೇಶ ಸರ್ಕಾರ ಕೋವಿಡ್ ಸಂಕಷ್ಟದಲ್ಲೂ ಸಹ ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ ನೀಡಿದೆ.
ತುಟ್ಟಿ ಭತ್ಯೆಯಲ್ಲಿ ಹೆಚ್ಚಳದ ಲಾಭವನ್ನು 15 ಲಕ್ಷಕ್ಕೂ ಹೆಚ್ಚಿನ ಸರ್ಕಾರಿ ಉದ್ಯೋಗಿಗಳು ಮುಂದಿನ ದಿನಗಳಲ್ಲಿ ಸ್ವೀಕರಿಸಲಿದ್ದಾರೆ. ಮುಂದಿನ ಏಳು ತಿಂಗಳುಗಳಲ್ಲಿ, ತುಟ್ಟಿ ಭತ್ಯೆ ಹಾಗೂ ಒಂದೇ ಬಾರಿಗೆ ವೇತನದಲ್ಲಿ ಹೆಚ್ಚಳವನ್ನೂ ಸಹ ನೌಕರರು ಸ್ವೀಕರಿಸಲಿದ್ದಾರೆ.
ಕೋವಿಡ್-19 ಲಸಿಕೆ ಹಾಕಿಸಿಕೊಂಡವರಿಗೆ 20 ಕೆಜಿ ಅಕ್ಕಿ…!
ವಾರ್ಷಿಕ ವೇತನದಲ್ಲಿ 3% ಹೆಚ್ಚಳ ಹಾಗೂ ತುಟ್ಟಿ ಭತ್ಯೆಯಲ್ಲಿ 11% ಏರಿಕೆಯನ್ನು ಜುಲೈ ತಿಂಗಳಲ್ಲಿ ಸರ್ಕಾರಿ ನೌಕರರು ಸ್ವೀಕರಿಸಲಿದ್ದಾರೆ. ಪಿಂಚಣಿದಾರರಿಗೂ ಸಹ ಸರ್ಕಾರದ ಈ ನಿರ್ಧಾರದಿಂದ ಪ್ರಯೋಜವಾಗಲಿದೆ.
60,000 ಮಂದಿಗೆ ಮಾತ್ರ ಹಜ್ ಯಾತ್ರೆಗೆ ಅವಕಾಶ
ತುಟ್ಟಿ ಭತ್ಯೆ ಹಾಗೂ ವೇತನ ಹೆಚ್ಚಳದಿಂದ ಉ.ಪ್ರ. ಸರ್ಕಾರದ ಬೊಕ್ಕಸಕ್ಕೆ 3000 ಕೋಟಿ ರೂಪಾಯಿಗಳ ಹೆಚ್ಚುವರಿ ಹೊರೆ ಬೀಳಲಿದೆ.