alex Certify Big News: ಬಾಂಬೆ ಹೈಕೋರ್ಟ್ ನ ಈ ಆದೇಶದ ನಂತರ ಜನಪ್ರತಿನಿಧಿಗಳಿಗೆ ಶುರುವಾಯ್ತು ನಡುಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಬಾಂಬೆ ಹೈಕೋರ್ಟ್ ನ ಈ ಆದೇಶದ ನಂತರ ಜನಪ್ರತಿನಿಧಿಗಳಿಗೆ ಶುರುವಾಯ್ತು ನಡುಕ

ರಾಜ್ಯದ ಸಂಸದರು ಮತ್ತು ಶಾಸಕರ ವಿರುದ್ಧದ ವಿಚಾರಣಾ ಕ್ರಿಮಿನಲ್ ಮೊಕದ್ದಮೆಗಳಿಗೆ, ಹೈಕೋರ್ಟ್‌ನ ಆದೇಶದ ಮೂಲಕ ತಡೆಯಾಜ್ಞೆ ನೀಡಿರುವ ಪ್ರಕರಣಗಳ ವಿವರಗಳನ್ನು ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ಶನಿವಾರ ತನ್ನ ರಿಜಿಸ್ಟ್ರಿಗೆ ನಿರ್ದೇಶನ ನೀಡಿದೆ.

ಸಂಸತ್ತಿನ ಸದಸ್ಯರು ಮತ್ತು ವಿಧಾನಸಭೆಯ ಸದಸ್ಯರ ವಿರುದ್ಧದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ದೇಶದ ಎಲ್ಲಾ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ನಂತರ, ಮಹಾರಾಷ್ಟ್ರದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಎಸ್‌ಕೆ ಶಿಂಧೆ ಅವರ ವಿಶೇಷ ಪೀಠವನ್ನು ರಚಿಸಲಾಗಿದೆ.

ಮುಂಬೈ ಪೀಠವು ಈ ವಿಚಾರವಾಗಿ ಸುಮೋಟೊ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಹಾಲಿ ಅಥವಾ ಮಾಜಿ ಶಾಸಕರ ವಿರುದ್ಧದ, ಎಲ್ಲಾ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ವಿವರವಾದ ವರದಿಯನ್ನು ಪೀಠವು ಕೇಳಿದೆ. ನಾವು ಮೊದಲು ಅವರ ಪ್ರಕರಣಗಳನ್ನು ಪರಿಗಣಿಸುತ್ತೇವೆ ನಂತರ ವಿಷಯಗಳ ಆಧಾರದ ಮೇಲೆ ತಡೆಯಾಜ್ಞೆಯನ್ನು ವಿಸ್ತರಣೆ ಅಥವಾ ರದ್ದು ಮಾಡುತ್ತೇವೆ.‌ ಒಂದು ವೇಳೆ ತಡೆ ಅಗತ್ಯವಿದ್ದಲ್ಲಿ, ದಿನನಿತ್ಯದ ಆಧಾರದ ಮೇಲೆ ವಿಷಯವನ್ನು ಆಲಿಸಿ, ನಿರ್ಧರಿಸುತ್ತೇವೆ ಎಂದು ಪೀಠ ಹೇಳಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಮಹಾರಾಷ್ಟ್ರ, ಗೋವಾದ ನ್ಯಾಯಾಲಯಗಳು ಮತ್ತು ಹೈಕೋರ್ಟ್‌ನ ಪೀಠಗಳಲ್ಲಿ ಸರಿಸುಮಾರು 550 ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ. ಹೈಕೋರ್ಟ್ ಪೀಠಗಳಲ್ಲಿ 51 ಪ್ರಕರಣಗಳು ಬಾಕಿ ಇವೆ. ಪ್ರಧಾನ ಪೀಠದ ಮುಂದೆ 19, ನಾಗ್ಪುರ ಪೀಠದ ಮುಂದೆ ಒಂಬತ್ತು, ಔರಂಗಾಬಾದ್ ಪೀಠದ ಮುಂದೆ 21 ಮತ್ತು ಗೋವಾದ ಹೈಕೋರ್ಟ್‌ನಲ್ಲಿ ಎರಡು ಪ್ರಕರಣಗಳಿವೆ. ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ನಗರ ಮತ್ತು ಹವೇಲಿ ಸೇರಿದಂತೆ ಮಹಾರಾಷ್ಟ್ರ ಮತ್ತು ಗೋವಾದ ಕೆಳ ನ್ಯಾಯಾಲಯಗಳಲ್ಲಿ ಸುಮಾರು 500 ಪ್ರಕರಣಗಳು ಬಾಕಿ ಉಳಿದಿವೆ.

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ 45 ಬಾಕಿ ಉಳಿದಿರುವ ಪ್ರಕರಣಗಳಿವೆ ಇದು ಅತಿ ಹೆಚ್ಚು. ಪರ್ಭಾನಿಯಲ್ಲಿ 40 ಬಾಕಿ ಇರುವ ಪ್ರಕರಣಗಳಿದ್ದು, ಗಡ್ಚಿರೋಲಿಯಲ್ಲಿ ಶೂನ್ಯ ಪ್ರಕರಣಗಳಿವೆ‌‌.‌ ಈ ದತ್ತಾಂಶದಲ್ಲಿ ಹಿಂದಿನ ಮತ್ತು ಪ್ರಸ್ತುತ ಶಾಸಕರ ಹೆಸರುಗಳಿವೆ. ನಿತೇಶ್ ರಾಣೆ, ಏಕನಾಥ್ ಖಡ್ಸೆ, ಅನಿಲ್ ದೇಶಮುಖ್ ಮತ್ತು ಬಚ್ಚು ಕಡು ಅವರ ವಿರುದ್ಧ ಬಾಕಿ ಉಳಿದಿರುವ ಪ್ರಕರಣಗಳಿವೆ. ಶಾಸಕರ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಸಣ್ಣಪುಟ್ಟ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳು ಇವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...