
ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ಹೊಸದಾಗಿ 12 ಸದಸ್ಯರನ್ನು ನೇಮಕ ಮಾಡಬೇಕಾದ ವಿಚಾರದಲ್ಲಿ ರಾಜ್ಯಪಾಲರು ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವ ಸಂಬಂಧ ವಿವರಣೆ ಕೋರಿ ಕೇಂದ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ಸೂಚನೆ ಹೊರಡಿಸಿದೆ.
ಮೇಲ್ಮನೆಗೆ ಹೊಸದಾಗಿ 12 ಮಂದಿಯ ಆಯ್ಕೆ ಮಾಡಲು ಪಟ್ಟಿಯನ್ನು ಕಳಿಸಿ ಎಂಟು ತಿಂಗಳು ಕಳೆದಿದ್ದರೂ ಈ ವಿಚಾರವಾಗಿ ರಾಜ್ಯಪಾಲರು ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ.
ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಸುದ್ದಿ..! ಭಾರತ-ಪಾಕ್ ಮಧ್ಯೆ ನಡೆಯಲಿದೆ ಪಂದ್ಯ
ರಾಜ್ಯಪಾಲರ ಈ ನಡೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿರುವ ರತನ್ ಸೋಲಿ ಲುತ್ ಎಂಬುವವರು ಈ ಸಂಬಂಧ ನ್ಯಾಯಾಲಯದ ಮಧ್ಯ ಪ್ರವೇಶ ಕೋರಿದ್ದಾರೆ. ರಾಜ್ಯಪಾಲರ ಈ ನಡೆಯಿಂದ ಸಂವಿಧಾನದ 163 (1) ಹಾಗೂ 171 (5) ವಿಧಿಗಳ ಉಲ್ಲಂಘನೆ ಮಾಡಿದಂತಾಗಿದೆ ಎಂದು ಅರ್ಜಿದಾರರು ಆಪಾದನೆ ಮಾಡಿದ್ದಾರೆ.