ವಿಡಿಯೋ ಕಾನ್ಫರೆನ್ಸ್ ಮುಖಾಂತರ ನಡೆಯುತ್ತಿದ್ದ ಕೋರ್ಟ್ ವಿಚಾರಣೆ ವೇಳೆ ತಮ್ಮ ಮೈಕ್ರೋಫೋನ್ ಆನ್ ಅಲ್ಲೇ ಇದೆ ಎಂಬುದನ್ನು ಮರೆತು ನ್ಯಾಯಾಲಯದ ವಿರುದ್ಧವೇ ಮಾತನಾಡಿದ ಕಿರಿಯ ವಕೀಲರೊಬ್ಬರನ್ನು ಬಾಂಬೆ ಹೈಕೋರ್ಟ್ ನ್ಯಾಯಾಧೀಶ ಸಾರಂಗ್ ಕೋತ್ವಾಲ್ ತರಾಟೆಗೆ ತೆಗೆದುಕೊಂಡಿದ್ದಾರೆ.
ತಮ್ಮ ಮೈಕ್ರೋಫೋನ್ ಚಾಲನೆಯಲ್ಲಿದೆ ಎಂಬುದನ್ನು ಮರೆತ ವಕೀಲರು, ಕೋತ್ವಾಲ್‌ರ ಕೋರ್ಟ್‌ನಲ್ಲಿ ಸಿಕ್ಕಾಪಟ್ಟೆ ಜನಜಂಗುಳಿ ಇದೆ” ಎಂದಿದ್ದಾರೆ.
ಈ ಸಂದರ್ಭದಲ್ಲಿ ಸಾರ್ವಜನಿಕ ಅಭಿಯೋಜಕರು, ಪೊಲೀಸ್ ಪೇದೆಗಳು ಹಾಗೂ ಇನ್ನಿತರ ಸಿಬ್ಬಂದಿ ಕೋರ್ಟ್ ಕೋಣೆಯಲ್ಲಿ ಹಾಜರಿದ್ದರು. ಕೋವಿಡ್ ಕಾರಣದಿಂದ ಕೋರ್ಟ್‌ನ ಆಲಿಕೆಗಳು ಸಾಮಾನ್ಯವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತವೆಯಾದರೂ ಕೆಲವೊಂದು ಸಿಬ್ಬಂದಿ ಖುದ್ದು ನ್ಯಾಯಾಲಯದ ಪ್ರಾಂಗಣದಲ್ಲಿ ಹಾಜರಿರಬೇಕಾಗುತ್ತದೆ.
ಏನಿದು ಏಂಜೆಲ್ ಶಾಟ್…? ವೈರಲ್ ಆಯ್ತು ಬಾರ್ ಟೆಂಡರ್ ವಿವರಣೆ
ವಕೀಲರ ಈ ಮಾತುಗಳನ್ನು ಆಲಿಸಿದ ನ್ಯಾಯಾಧೀಶ ಕೋತ್ವಾಲ್, ಹಾಗೆ ಹೇಳಿದ್ದು ಯಾರೆಂದು ಪತ್ತೆ ಮಾಡಲು ತಮ್ಮ ಸಿಬ್ಬಂದಿಯನ್ನು ಕೇಳಿದ್ದಾರೆ. ಆತ ಯಾರೆಂದು ತಿಳಿಯುವ ವೇಳೆಗಾಗಲೇ ಆ ವಕೀಲ ಲಾಗೌಟ್ ಆಗಿ, ಅವರ ಜಾಗದಲ್ಲಿ ಮತ್ತೊಬ್ಬ ವಕೀಲರು ಕುಳಿತಿದ್ದರು.
ಕೆಲ ಕ್ಷಣಗಳ ಬಳಿಕ ಅದೇ ವಕೀಲರು ಹಾಜರಾಗಿ ತಮ್ಮ ಪ್ರಮಾದಕ್ಕೆ ಕ್ಷಮೆಯಾಚಿಸಿದ್ದಾರೆ. ವಕೀಲರ ಕ್ಷಮಾಪಣೆಯನ್ನು ಒಪ್ಪಲು ನಿರಾಕರಿಸಿದ ನ್ಯಾಯಾಧೀಶರು, “ನನ್ನ ಕೋರ್ಟ್‌ರೂಂ ಒಳಗೆ ಯಾರನ್ನು ಕರೆಯಬೇಕು, ಸೇರಿಸಬೇಕೆಂಬುದು ನನ್ನ ಇಚ್ಛೆಗೆ ಬಿಟ್ಟ ವಿಷಯ. ನ್ಯಾಯಾಂಗ ಸಂಬಂಧಿ ಜ್ಞಾನಕ್ಕಿಂತ ನೀವು ಕೋರ್ಟ್ ಅಂಗಳದಲ್ಲಿ ಸರಿಯಾಗಿ ವರ್ತಿಸುವುದನ್ನು ಕಲಿಯುವುದು ಸೂಕ್ತ. ನೀವು ವ್ಯವಸ್ಥೆಗೆ ಗೌರವ ಕೊಡದೇ ಇದ್ದರೆ ವ್ಯವಸ್ಥೆ ನಿಮ್ಮನ್ನು ಗೌರವಿಸುವುದಿಲ್ಲ” ಎಂದು ನ್ಯಾಯಾಧೀಶ ಕೋತ್ವಾಲ್ ಕಿರಿಯ ವಕೀಲರಿಗೆ ಬುದ್ಧಿಮಾತು ಹೇಳಿದ್ದಾರೆ.