alex Certify BREAKING : ‘ಕೆಂಪೇಗೌಡ ಏರ್ ಪೋರ್ಟ್’ ಗೆ ಬಾಂಬ್ ಬೆದರಿಕೆ ಸಂದೇಶ, ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ದೌಡು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ಕೆಂಪೇಗೌಡ ಏರ್ ಪೋರ್ಟ್’ ಗೆ ಬಾಂಬ್ ಬೆದರಿಕೆ ಸಂದೇಶ, ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ದೌಡು..!

ಬೆಂಗಳೂರು : ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನ ಸಿಬ್ಬಂದಿ ಕಟ್ಟಡದಲ್ಲಿ ಬಾಂಬ್ ಬೆದರಿಕೆ ಬಂದಿದ್ದು, ಸ್ಥಳಕ್ಕೆ ಬಾಂಬ್ ಸ್ಕ್ವಾಡ್, ಶ್ವಾನದಳ ದೌಡಾಯಿಸಿ ತಪಾಸಣೆ ನಡೆಸಿದೆ.

ಏರ್ ಪೋರ್ಟ್ ನ ಸಿಬ್ಬಂದಿ ಕಚೇರಿಯನ್ನು ಸ್ಪೋಟಿಸುವುದಾಗಿ ಏರ್ ಪೋರ್ಟ್ ಸಿಬ್ಬಂದಿ ಕಟ್ಟಡದ ಬಾತ್ ರೂಮ್ ಕನ್ನಡಿ ಮೇಲೆ ಬರೆಯಲಾಗಿತ್ತು. ಇದರಿಂದ ಆತಂಕಗೊಂಡ ಸಿಬ್ಬಂದಿಗಳು ಕೂಡಲೇ ಬಾಂಬ್ ಸ್ಕ್ವಾಡ್, ಶ್ವಾನದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬಾಂಬ್ ಸ್ಕ್ವಾಡ್, ಶ್ವಾನದಳ ತಪಾಸಣೆ ನಡೆಸಿದ್ದು, ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ. ನಂತರ ಇದು ಹುಸಿಬಾಂಬ್ ಸಂದೇಶ ಎಂದು ತಿಳಿದು ಬಂದಿದೆ.

ಏರ್ ಪೋರ್ಟ್ ಸಿಬ್ಬಂದಿಯಿಂದಲೇ ಬೆದರಿಕೆ ಹಾಕಿರುವ ಸಂಶಯ ವ್ಯಕ್ತವಾಗಿದ್ದು, ಏರ್ ಪೋರ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...