ಬೆಂಗಳೂರು : ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸದ ಬಳಿ ವ್ಯಕ್ತಿಯೋರ್ವ ಬಾಂಬ್ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.
ಕಾವೇರಿ ನಿವಾಸದ ಬಳಿ ಸಿಎಂ ಸಿದ್ದರಾಮಯ್ಯ ಅವರಿಗೆ ವ್ಯಕ್ತಿಯೊಬ್ಬರು ಮನವಿ ನೀಡಲು ಬಂದಿದ್ದರು. ಈ ವೇಳೆ ಪೊಲೀಸರು ಅವರಿಗೆ ಅವಕಾಶ ನೀಡದ ಹಿನ್ನೆಲೆ ವ್ಯಕ್ತಿ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಬೆದರಿಸಿದ್ದಾರೆ.
ವ್ಯಕ್ತಿಯ ಹೇಳಿಕೆಗೆ ಪೊಲೀಸರೇ ತಬ್ಬಿಬ್ಬಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಬಂದ ವ್ಯಕ್ತಿಯನ್ನು ಪೊಲೀಸರು ತಡೆದಿದ್ದಕ್ಕೆ ಗರಂ ಆಗಿದ್ದು, ಸುಮ್ಮನೆ ನನ್ನ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಹೇಳಿದ್ದಾನೆ. ಆದರೆ ಆತನ ಬ್ಯಾಗ್ ನಲ್ಲಿ ಯಾವುದೇ ಅಂತಹ ವಸ್ತುಗಳು ಇರಲಿಲ್ಲ.