ಲಂಡನ್: ಎರಡನೆಯ ಮಹಾಯುದ್ಧದ ಯುದ್ಧಸಾಮಗ್ರಿಯು ವ್ಯಕ್ತಿಯೊಬ್ಬನ ಗುದನಾಳದಲ್ಲಿ ಸಿಲುಕಿಕೊಂಡ ನಂತರ ಬಾಂಬ್ ಸ್ಕ್ವಾಡ್ ಅನ್ನು ಆಸ್ಪತ್ರೆಗೆ ಕರೆಯಲಾದ ಆಘಾತಕಾರಿ ಘಟನೆ ಪಶ್ಚಿಮ ಇಂಗ್ಲೆಂಡ್‌ನ ಗ್ಲೌಸೆಸ್ಟರ್‌ಶೈರ್‌ನಲ್ಲಿ ನಡೆದಿದೆ.
ಆಸ್ಪತ್ರೆಯ ತುರ್ತು ವಿಭಾಗಕ್ಕೆ ವ್ಯಕ್ತಿಯೊಬ್ಬರು ದಾಖಲಾಗಿದ್ದು, ಎರಡನೇ ಮಹಾಯುದ್ಧದ ಯುದ್ಧಸಾಮಗ್ರಿ ಗುದನಾಳದಲ್ಲಿ ಸಿಲುಕಿಕೊಂಡಿರುವ ವಿಚಾರ ಗೊತ್ತಾಗಿದೆ. ಮದ್ದುಗುಂಡುಗಳು ಸ್ಫೋಟಗೊಳ್ಳುವ ಸಾಧ್ಯತೆಯಿದೆ ಎಂದು ಹೆದರಿದ ವೈದ್ಯರು, ಬಾಂಬ್ ಸ್ಕ್ವಾಡ್ ಅನ್ನು ಆಸ್ಪತ್ರೆಗೆ ಕರೆಸಿದ್ದಾರೆ.
ಯುದ್ಧಸಾಮಗ್ರಿಯನ್ನು ಎರಡನೇ ಮಹಾಯುದ್ಧದ 57 ಎಂಎಂ ಶೆಲ್ ಎಂದು ಗುರುತಿಸಲಾಯಿತು. ವ್ಯಕ್ತಿಯು ಶೆಲ್ ಅನ್ನು ನೋಡಿದ್ದು, ಅದನ್ನು ನೆಲದ ಮೇಲೆ ಇಟ್ಟಿದ್ದಾನೆ. ಈ ವೇಳೆ ಅದರ ಮೇಲೆಯೇ ಜಾರಿಬಿದ್ದ ಆತನ ಗುದನಾಳದೊಳಗೆ ಶೆಲ್ ಹೋಗಿದೆ. ಈ ವೇಳೆ ಸಾಕಷ್ಟು ನೋವಿನಿಂದ ಬಳಲುತ್ತಿದ್ದ ವ್ಯಕ್ತಿ ಕೂಡಲೇ ಆಸ್ಪತ್ರೆಗೆ ಓಡೋಡಿ ಬಂದಿದ್ದಾನೆ.
ಇನ್ನು ರೋಗಿಯ ಗುದನಾಳದಲ್ಲಿ ಮದ್ದುಗುಂಡು ಸೇರಿದೆ ಎಂಬ ವಿಚಾರ ಗೊತ್ತಾದ ಕೂಡಲೇ ಆಸ್ಪತ್ರೆಗೆ ಪೊಲೀಸರು ಧಾವಿಸಿದ್ದಾರೆ. ಪೊಲೀಸ್ ಆಗಮನದ ಮೊದಲೇ ಮದ್ದುಗುಂಡನ್ನು ಆತನ ಗುದನಾಳದಿಂದ ಹೊರತೆಗೆಯಲಾಗಿತ್ತು.
ಶೆಲ್ ಬಗ್ಗೆ ಮಾಹಿತಿ ನೀಡಿರುವ ರಕ್ಷಣಾ ಮೂಲ, ಇದು ತೊಟ್ಟಿಯ ರಕ್ಷಾಕವಚವನ್ನು ಸೀಳಲು ವಿನ್ಯಾಸಗೊಳಿಸಲಾದ ಒಂದು ದಪ್ಪನಾದ, ಮೊನಚಾದ ಸೀಸದ ಉಂಡೆಯಾಗಿತ್ತು. ಇದು ಲೋಹದ ಉಂಡೆಯಾಗಿದ್ದು, ಆದ್ದರಿಂದ ಜೀವಕ್ಕೆ ಯಾವುದೇ ಅಪಾಯವಿರಲಿಲ್ಲ ಎಂದು ಹೇಳಿದೆ.