ಇಸ್ಲಾಮಾಬಾದ್: ಇತ್ತೀಚೆಗೆ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡವು ಕೆಲವು ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿದೆ. ಇದಕ್ಕೆ ಭಾರತದ ರ್ಯಾಪರ್ ಓಂ ಪ್ರಕಾಶ್ ಮಿಶ್ರಾ ಕಾರಣ ಎಂದು ಪಾಕಿಸ್ತಾನ ಆರೋಪಿಸಿದೆ.
18 ವರ್ಷಗಳ ನಂತರ ನ್ಯೂಜಿಲ್ಯಾಂಡ್ ಕ್ರಿಕೆಟ್ ಟೀಂ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಇನ್ನೇನು ಸರಣಿ ಶುರುವಾಗಬೇಕು ಅನ್ನೋವಷ್ಟರಲ್ಲಿ ಕಿವೀಸ್ ತಂಡ ಪಂದ್ಯ ರದ್ದಗೊಳಿಸಿ ನ್ಯೂಜಿಲ್ಯಾಂಡ್ ಗೆ ವಾಪಸ್ಸಾಗಿದೆ. ಈ ಪ್ರವಾಸದಲ್ಲಿ ನ್ಯೂಜಿಲ್ಯಾಂಡ್ ಮೂರು ಏಕದಿನ ಮತ್ತು ಐದು ಟಿ-20 ಪಂದ್ಯಗಳ ಸರಣಿಯನ್ನು ಆಡಬೇಕಿತ್ತು. ತಂಡದ ಭದ್ರತೆಗೆ ಬೆದರಿಕೆ ಇದೆ ಎಂಬ ಮಾಹಿತಿ ಸಿಕ್ಕ ಕೂಡಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಕಳೆದ ಶುಕ್ರವಾರ ನ್ಯೂಜಿಲ್ಯಾಂಡ್ ತಂಡವು ಪಾಕಿಸ್ತಾನದ ಪ್ರವಾಸವನ್ನು ಭದ್ರತೆ ಬೆದರಿಕೆಗಳನ್ನು ಮುಂದಿಟ್ಟು ರದ್ದುಗೊಳಿಸಿದೆ. ನ್ಯೂಜಿಲ್ಯಾಂಡ್ ತಂಡಕ್ಕೆ ಬೆದರಿಕೆ ಮೇಲ್ ಕಳುಹಿಸಲಾಗಿದ್ದು, ಇದು ಭಾರತದಿಂದ ಬಂದಿದೆ ಎಂದು ಪಾಕ್ ಗೂಬೆ ಕೂರಿಸಿದೆ.
ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಇಲಾಖೆಗಳ ಸಚಿವ ಫವಾದ್ ಚೌಧರಿ ಮಾತನಾಡಿ, “ಕಿವೀಸ್ ಗೆ ಬಂದ ಬೆದರಿಕೆ ಮೇಲ್ ನಲ್ಲಿ ಹಮ್ಜಾ ಅಫ್ರಿದಿ ಐಡಿ ಬಳಸಲಾಗಿದೆ. ಭಾರತ ಮೂಲದ ಸಾಧನದಿಂದ ಇಮೇಲ್ ಕಳುಹಿಸಲಾಗಿದೆ ಎಂದು ತನಿಖಾ ಅಧಿಕಾರಿಗಳಿಗೆ ತಿಳಿದು ಬಂದಿದೆ. ಇದನ್ನು ವರ್ಚುವಲ್ ಪ್ರೈವೇಟ್ ನೆಟ್ವರ್ಕ್ ನಿಂದ ಕಳುಹಿಸಲಾಗಿದ್ದು, ಇದರಲ್ಲಿ ಇನ್ನೂ 13 ಗುರುತಿನ ಚೀಟಿಗಳಿವೆ. ಅವುಗಳಲ್ಲಿ ಹೆಚ್ಚಿನವು ಭಾರತೀಯ ಹೆಸರುಗಳು. ನ್ಯೂಜಿಲೆಂಡ್ ತಂಡಕ್ಕೆ ಬೆದರಿಕೆ ಹಾಕಲು ಈ ಸಾಧನವನ್ನು ಭಾರತದಿಂದ ನಕಲಿ ಐಡಿಯಲ್ಲಿ ಬಳಸಲಾಗಿದೆ. ಅಲ್ಲದೆ ಬೆದರಿಕೆ ಮೇಲ್ ಅನ್ನು ಮಹಾರಾಷ್ಟ್ರದಿಂದ ಕಳುಹಿಸಲಾಗಿದೆ” ಎಂದು ಅವರು ಆರೋಪಿಸಿದ್ದಾರೆ. ಪಾಕ್ ಸಚಿವನ ಈ ಆರೋಪಕ್ಕೆ ಭಾರತೀಯ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
https://twitter.com/whogaurav12/status/1440897954022248448?ref_src=twsrc%5Etfw%7Ctwcamp%5Etweetembed%7Ctwterm%5E1440897954022248448%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fpak-minister-blames-om-prakash-mishra-aka-bol-na-aunty-for-cancelled-new-zealand-tour-netizens-in-splits%2F815618