
ಶಾರುಖ್ ಖಾನ್ ನನ್ನು ಸುಖಾಸುಮ್ಮನೆ ಬಾಲಿವುಡ್ ಕಿಂಗ್ ಎಂದು ಕರೆಯಲಾಗಲ್ಲ. ನಿಜವಾಗಿಯೂ ಆತ ರಾಜನಂತೆಯೇ ಬಾಳುತ್ತಿದ್ದಾನೆ. ನೂರಾರು ಎಕರೆಗಳ ವಿಸ್ತೀರ್ಣದ ’ಮನ್ನತ್ ’ ಎಂಬ ಬಂಗಲೆ. ಅದರಲ್ಲೇ ಸ್ವಿಮ್ಮಿಂಗ್ ಪೂಲ್, ಜಿಮ್, ಪಾರ್ಟಿ ಹಾಲ್, ಕಿಚನ್, ಮಾಸ್ಟರ್ ಬೆಡ್ ರೂಮ್, ಹೋಟೆಲ್, ಕ್ಲಬ್‌ಗಳು ಇವೆಯಂತೆ.
ಇನ್ನು ಕಾರುಗಳ ಸಂಗ್ರಹಕ್ಕೆ ಬಂದರೆ ಶಾರುಖ್ ಬಳಿ ಇರುವಷ್ಟು ಐಷಾರಾಮಿ ಮತ್ತು ಅತ್ಯಂತ ದುಬಾರಿ ಕಾರುಗಳ ಸಂಗ್ರಹ ಬಹುಶಃ ಬೇರೆ ಯಾವ ನಟರ ಬಳಿಯೂ ಇಲ್ಲ.
ರೋಲ್ಸ್ ರಾಯ್ಸ್ ಫ್ಯಾಂಟಮ್, ಬುಗಾಟಿ ವೇಯ್‌ರಾನ್, ಆಡಿ ಎ6, ವೊಲ್ವೊ ಬಿಆರ್9 (ಪೂರ್ಣವಾಗಿ ಅಗತ್ಯಕ್ಕೆ ತಕ್ಕಂತೆಯೇ ಮಾರ್ಪಡಿಸಲಾಗಿರುವುದು) ಶಾರುಖ್‌ನ ಖಾಸಗಿ ಗ್ಯಾರೇಜ್‌ನಲ್ಲಿವೆ.
‘ಕೋಟಿಗೊಬ್ಬ 3’ ನೋಡಲು ಬಂದ ಸುದೀಪ್ ಅಭಿಮಾನಿಗಳಿಗೆ ಬಿಗ್ ಶಾಕ್
ಇವುಗಳಿಗೆಲ್ಲ ಮುಕುಟಪ್ರಾಯವಾಗಿ ಇರುವುದು ಶಾರುಖ್ ಬಳಸುವ ’ವ್ಯಾನಿಟಿ ವ್ಯಾನ್’. ಅಂದರೆ ಶೂಟಿಂಗ್‌ಗಾಗಿ ತೆರಳುವಾಗ (ವಿದೇಶಗಳ ಹೊರತಾಗಿ) ಶಾರುಖ್ ಖಾನ್ ಅವರು ಸೀನ್‌ಗಳ ನಡುವೆ ವಿರಾಮಕ್ಕಾಗಿ ಬಳಸುವ ಖಾಸಗಿ ಬಸ್ ಇದು. ಬಹುಶಃ ಎಲ್ಲ ಸ್ಟಾರ್ ನಟರ ಬಳಿಯೂ ಇದು ಇರುತ್ತದೆ.
ಇದನ್ನು ವಿನ್ಯಾಸಗೊಳಿಸಿದವನು ಖ್ಯಾತ ವಿನ್ಯಾಸಕ ದಿಲೀಪ್ ಛಾಬ್ರಿಯಾ. ಅದರ ಫೋಟೊಗಳು ನಿಮಗಾಗಿ ನೀಡಲಾಗಿದೆ. ಪೂರ್ಣ ಗ್ಲಾಸ್‌ನಿಂದಲೇ ಮಾಡಲಾದ ನೆಲವನ್ನು ಈ ಬಸ್ ಹೊಂದಿದೆ. ಐಪ್ಯಾಡ್‌ನಿಂದಲೇ ಎಲ್ಲ ಸಾಧನಗಳು ನಿಯಂತ್ರಿತ. ಕೇವಲ ಶಾರುಖ್‌ನಿಂದ ಮೌಖಿಕ ಆದೇಶ ಸಿಕ್ಕರೆ ಸಾಕು.
ಒಟ್ಟಿನಲ್ಲಿ ‘1 ಬಿಎಚ್‌ಕೆ ಫ್ಲ್ಯಾಟ್ ‘ ನಷ್ಟು ಜಾಗ ಶಾರುಖ್ ಖಾನ್ ಬಸ್‌ನಲ್ಲಿ ಇರಿಸಿಕೊಂಡು ತಿರುಗಾಡುತ್ತಾರೆ !


