ಬಾಲಿವುಡ್ ನ ಬೇಡಿಕೆಯ ನಟಿ ಕರೀನಾ ಕಪೂರ್ ಇಂದು 44ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟು ಹಬ್ಬವನ್ನು ಕುಟುಂಬದೊಂದಿಗೆ ಸರಳವಾಗಿ ಆಚರಿಸಿದ್ದಾರೆ.
2000 ರಲ್ಲಿ ತೆರೆ ಕಂಡ ಅಭಿಷೇಕ್ ಬಚ್ಚನ್ ನಟನೆಯ ‘ರೆಫ್ಯೂಜಿ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು ಬಳಿಕ 2001 ರಲ್ಲಿ ‘ಮುಝೆ ಕುಚ್ಚ್ ಕೆಹನಾ ಹೈ’ ‘ಯಾದೇನ್’ ‘ಅಜ್ನಾಬೀ’ ‘ಅಶೋಕ’ ‘ಕಭಿ ಖುಷಿ ಕಭಿ ಗಮ್’ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡರು.
ನಟಿ ಕರಿನ ಕಪೂರ್ ಅಂದಿನಿಂದ ಇಂದಿನವರೆಗೂ ಬಹು ಬೇಡಿಕೆಯ ನಟಿಯಾಗಿದ್ದು, ಇತ್ತೀಚಿಗೆ ‘ಕ್ರ್ಯೂ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ‘ಸಿಂಘಮ್ ಎಗೈನ್’ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ನ ಹಿರಿಯ ಹಾಗೂ ಯುವ ನಟ ನಟಿಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.