
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸದ್ಯ ಲಂಡನ್‌ನಲ್ಲಿದ್ದಾರೆ. ನಟಿ ಪರಿಣಿತಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಲಂಡನ್ ನ ಕೆಲ ಫೋಟೋಗಳನ್ನು ಈ ಹಿಂದೆ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಈಗ ಕೊರೊನಾ ಲಸಿಕೆ ತೆಗೆದುಕೊಂಡಿರುವ ವಿಷ್ಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಲಂಡನ್‌ನಲ್ಲಿ ಕೊರೊನಾ ಲಸಿಕೆ ಸ್ವೀಕರಿಸಿರುವ ಪರಿಣಿತಿ ಇನ್‌ಸ್ಟಾಗ್ರಾಮ್‌ನಲ್ಲಿ ಅನುಭವ ಹಂಚಿಕೊಂಡಿದ್ದಾರೆ. ವ್ಯಾಕ್ಸಿನೇಷನ್ ನಂತರ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಖುಷಿಯಾಗಿರುವ ಪರಿಣಿತಿ ಎರಡನೇ ಫೋಟೋದಲ್ಲಿ ಸುಸ್ತಾದಂತೆ ಕಾಣ್ತಿದ್ದಾರೆ.
ಲಸಿಕೆ ನಂತ್ರ ತುಂಬಾ ನೋವಾಗ್ತಿದೆ ಎಂದು ಪರಿಣಿತಿ ಹೇಳಿದ್ದಾರೆ. ಎಡಗೈ ಹೆಚ್ಚು ನೋಯ್ತಿದೆ ಎಂದಿರುವ ಪರಿಣಿತಿ, ನಾಯಿ ಜೊತೆಗಿರುವ ಫೋಟೋವನ್ನು ಪ್ರಿಯಾಂಕಾ ಚೋಪ್ರಾ ಕ್ಲಿಕ್ಕಿಸಿದ್ದಾಗಿ ಹೇಳಿದ್ದಾರೆ.
ಫೋಟೋ ನೋಡಿದ ಅಭಿಮಾನಿಗಳು, ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಪರಿಣಿತಿ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ಸಂದೀಪ್ ಔರ್ ಪಿಂಕಿ ಫರಾರ್, ದಿ ಗರ್ಲ್ ಆನ್ ದಿ ಟ್ರೈನ್ ಮತ್ತು ಸೈನಾ ಚಿತ್ರ ಬಿಡುಗಡೆಯಾಗಿದೆ.