alex Certify ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆಗೆ `ಗ್ಲೋಬಲ್ ಅಚಿವರ್ಸ್ʼ ಪ್ರಶಸ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆಗೆ `ಗ್ಲೋಬಲ್ ಅಚಿವರ್ಸ್ʼ ಪ್ರಶಸ್ತಿ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಿರೀಟಕ್ಕೆ ಮತ್ತೊಂದು ಗರಿ ಮೂಡಿದೆ. ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಸಿಕ್ಕಿದೆ. ಗ್ಲೋಬಲ್ ಅಚಿವರ್ಸ್ ಪ್ರಶಸ್ತಿ 2021ಕ್ಕೆ ದೀಪಿಕಾ ಆಯ್ಕೆಯಾಗಿದ್ದಾರೆ. ಈ ಪಟ್ಟಿಯಲ್ಲಿ ಬರಾಕ್ ಒಬಾಮಾ, ಜೆಫ್ ಬೆಜೋಸ್, ಕ್ರಿಸ್ಟಿಯಾನೊ ರೊನಾಲ್ಡೊ ಸೇರಿದಂತೆ ಪ್ರಪಂಚದ ದಿಗ್ಗಜರ ಹೆಸರಿದೆ.

ಗ್ಲೋಬಲ್ ಅಚಿವರ್ಸ್ ಅವಾರ್ಡ್ಸ್ 2021 ಈ ವರ್ಷ 3000 ಕ್ಕೂ ಹೆಚ್ಚು ನಾಮನಿರ್ದೇಶನಗಳನ್ನು ಸ್ವೀಕರಿಸಲಾಗಿತ್ತು. ಎಲ್ಲರೂ ತಮ್ಮ  ಕ್ಷೇತ್ರಗಳಲ್ಲಿ ಯಶಸ್ವಿ ದಾಖಲೆಯನ್ನು ಹೊಂದಿರುವುದರಿಂದ, ತೀರ್ಪುಗಾರರಿಗೆ ವಿಜೇತರನ್ನು ಆಯ್ಕೆ ಮಾಡುವುದು ಕಷ್ಟವಾಗಿತ್ತಂತೆ.

ಖ್ಯಾತ ನಟ ಶಿವಾಜಿ ಗಣೇಶನ್​​ಗೆ ಗೂಗಲ್​ ಡೂಡಲ್​ ಗೌರವ

ಈ ಪ್ರಶಸ್ತಿಗಾಗಿ ದೀಪಿಕಾ ಮಾತ್ರ ಬಾಲಿವುಡ್ ನಿಂದ ನಾಮನಿರ್ದೇಶನಗೊಂಡಿದ್ದರು. ನಾಮ ನಿರ್ದೇಶನಗೊಂಡಿದ್ದವರಲ್ಲಿ ಭಾರತದ ಏಕೈಕ ನಟಿಯಾಗಿದ್ದ ದೀಪಿಕಾ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ದೀಪಿಕಾ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಫ್ಯಾಷನ್ ಕ್ಷೇತ್ರದಲ್ಲಿ ಮಾತ್ರವಲ್ಲ ನಟನೆಯಲ್ಲೂ, ದೀಪಿಕಾ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

ಬಾಲ್ಯದಲ್ಲಿ ನಡೆದ ಆಘಾತಕಾರಿ ಘಟನೆಯನ್ನು ಬಹಿರಂಗಪಡಿಸಿದ ಖ್ಯಾತ ಗಾಯಕಿ..!

ಭಾರತದ ಅತ್ಯುತ್ತಮ ನಟಿಯರ ಪಟ್ಟಿಯಲ್ಲಿರುವ ದೀಪಿಕಾ, 2018 ರಲ್ಲಿ ಟೈಮ್ ನಿಯತಕಾಲಿಕ ಬಿಡುಗಡೆ ಮಾಡಿದ್ದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.ಈ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ನಟಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಿದ್ದಕ್ಕಾಗಿ ದೀಪಿಕಾ, 26 ನೇ ವಾರ್ಷಿಕ ಕ್ರಿಸ್ಟಲ್ ಪ್ರಶಸ್ತಿಯನ್ನು ಪಡೆದಿದ್ದರು. ಇದ್ರ ಜೊತೆ ದಾವೋಸ್ 2020 ವಿಜೇತರ ಪಟ್ಟಿಯಲ್ಲಿ ಕಾಣಿಸಿಕೊಂಡ ಭಾರತದ ಏಕೈಕ ನಟಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...