ವೀರ್ಯ ತುಂಬಿದ ಕಾಂಡೋಮ್ ತರಲು ವಿದ್ಯಾರ್ಥಿಗಳಿಗೆ ಶಿಕ್ಷಕಿ ಸೂಚನೆ ನೀಡಿದ್ದರ ವಿರುದ್ಧ ಪೋಷಕರು ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಇದು ನಡೆದಿರುವುದು ಭಾರತದಲ್ಲಲ್ಲ. ಬೊಲಿವಿಯಾದಲ್ಲಿ. ಸೆಕ್ಸ್ ಶಿಕ್ಷಣ ನೀಡುವ ಶಿಕ್ಷಕರು ನೀಡಿದ ಈ ಟಾಸ್ಕ್ ನಿಂದ ಅವರೀಗ ಪೋಷಕರ ಕೋಪಕ್ಕೆ ತುತ್ತಾಗಿ ಸ್ವತಃ ತೊಂದರೆಗೆ ಸಿಲುಕಿದ್ದಾರೆ.
ಶಿಕ್ಷಕರಾದ ಮರಿಯಾ ಇನೆಸ್ ಪೆರೆಡೋವ್, ತಮ್ಮ ವೀರ್ಯ ತುಂಬಿದ ಕಾಂಡೋಮ್ಗಳನ್ನು ತರಗತಿಗೆ ತರುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದರಂತೆ. ಈ ಸೂಚನೆಯು ಅವರನ್ನು ಕೆಲಸ ಕಳೆದುಕೊಳ್ಳುವ ಅಂಚಿಗೆ ತಂದಿದೆ. ಮರಿಯಾಳನ್ನು ವಜಾಗೊಳಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ. ಆದರೆ ಮಕ್ಕಳನ್ನು ಹಾದಿ ತಪ್ಪಿಸಿದ ಆರೋಪದ ನಂತರ ಮಾರಿಯಾ ಕ್ಷಮೆ ಯಾಚಿಸಿದ್ದಾರೆ.
ಹಾಗೆಯೇ ನಾನು ನಾಲ್ಕು ಚಿಕ್ಕ ಮಕ್ಕಳನ್ನು ಹೊಂದಿರುವ ಕುಟುಂಬದ ತಾಯಿ. ನಾನು ವಿಕೃತ ಮೆರೆದಿಲ್ಲ ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಒಣ ವಾತಾವರಣದಲ್ಲಿ ವೀರ್ಯವು ಎಷ್ಟು ಕಾಲ ಉಳಿಯುತ್ತದೆ ಎಂಬುದನ್ನು ನಿರ್ಧರಿಸುವುದು ಚಟುವಟಿಕೆಯಾಗಿತ್ತು ಎಂದು ಆಕೆ ಹೇಳುವ ಮೂಲಕ ಉದ್ದೇಶ ವಿವರಿಸಿದರು. ಮಕ್ಕಳಿಗೆ ಕಲಿಸುವುದು ತನ್ನ ಏಕೈಕ ಉದ್ದೇಶವಾಗಿತ್ತು. ಆದರೆ, ತನ್ನ ವಿದ್ಯಾರ್ಥಿಗಳು ಹಸ್ತಮೈಥುನದಲ್ಲಿ ತೊಡಗಿಸಿಕೊಳ್ಳಲು ಬಯಸಿದ ಲೈಂಗಿಕ ವಿಕೃತಿ ಶಿಕ್ಷಕಿ ಎಂದು ಚಿತ್ರಿಸಿದ್ದ ಮಾಧ್ಯಮವನ್ನು ದೂಷಿಸಿದರು.
ಅವರ ಪ್ರಕಾರ, ಗರ್ಭಿಣಿಯಾಗುವುದನ್ನು ತಪ್ಪಿಸಲು ಬಯಸಿದರೆ ಈ ಕೆಮಿಕಲ್ನಿಂದ ದೂರವಿರಲು ಹುಡುಗಿಯರನ್ನು ಎಚ್ಚರಿಸುವುದು ಪಾಠವಾಗಿತ್ತು.
ನಾನು ಯಾರನ್ನೂ ಕೊಂದಿಲ್ಲ, ಯಾರನ್ನೂ ಅತ್ಯಾಚಾರ ಮಾಡಿಲ್ಲ ಎಂದು ಹೇಳಿಕೊಂಡಿದ್ದು, ಲೈಂಗಿಕ ಶಿಕ್ಷಣ ತರಗತಿಯಲ್ಲಿ ಜ್ಞಾನವನ್ನು ನೀಡಿದ್ದಕ್ಕಾಗಿ ಶಿಕ್ಷೆ ನೀಡಿರುವುದು ದುರದೃಷ್ಟಕರ ಎಂದಿದ್ದಾರೆ.
ಮಿನೆರೊ ಪ್ರೌಢಶಾಲೆಯ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯ ಮೌಲ್ಯಮಾಪನ ಮಾಡಲಾಗುತ್ತಿದೆ, ಅದರ ಫಲಿತಾಂಶವು ಮುಂದಿನ ಕ್ರಮದ ಮೇಲೆ ಪರಿಣಾಮ ಬೀರುತ್ತದೆ. ತನಿಖೆಯ ಅವಧಿಗೆ ಮಾರಿಯಾ ಅವರನ್ನು ಪ್ರಸ್ತುತ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ಶಿಕ್ಷಣ ಇಲಾಖೆ ನಿರ್ದೇಶಕ ಎಡ್ವಿನ್ ಹುವಾಯ್ಲಾನಿ ತಿಳಿಸಿದ್ದಾರೆ.