ನಾನ್ವೆಜ್ ಇಷ್ಟಪಡದವರಲ್ಲಿ ಅನೇಕರು ಮೊಟ್ಟೆ ಅಂದರೆ ವ್ಹಾವ್ ಅಂತಾರೆ. ಈ ಮೊಟ್ಟೆಗಳು ಟೇಸ್ಟಿ ಮಾತ್ರವಲ್ಲದೇ ಸಾಕಷ್ಟು ಜೀವಸತ್ವ, ಖನಿಜಗಳು ಪ್ರೋಟೀನ್ಗಳನ್ನು ಹೊಂದಿದೆ. ಆದರೆ ಮೊಟ್ಟೆಯಿಂದ ತಯಾರಿಸಿದ ಆಮ್ಲೇಟ್ ಅಥವಾ ಬೇಯಿಸಿದ ಮೊಟ್ಟೆಯಲ್ಲಿ ಯಾವುದು ಹೆಚ್ಚಿನ ಪ್ರಯೋಜನಕಾರಿ ಎಂಬ ವಿಚಾರದಲ್ಲಿ ಇಂದಿಗೂ ಅನೇಕರಲ್ಲಿ ಗೊಂದಲವಿದೆ. ಕೆಲವರು ಆಮ್ಲೇಟ್ನಿಂದ ದೇಹಕ್ಕೆ ಹೆಚ್ಚು ಲಾಭ ಅಂತಾ ಹೇಳಿದ್ರೆ ಇನ್ನೂ ಕೆಲವರು ಬೇಯಿಸಿದ ಮೊಟ್ಟೆಯೇ ಆರೋಗ್ಯಕ್ಕೆ ಬೆಸ್ಟ್ ಅಂತಾರೆ; ಆದರೆ ನಿಮ್ಮ ಈ ಗೊಂದಲಕ್ಕೆ ಇಂದು ನಾವು ಉತ್ತರ ಹೇಳ್ತೀವಿ.
ಬೇಯಿಸಿದ ಮೊಟ್ಟೆಗಳು : ಮೊಟ್ಟೆಯಿಂದ ತಯಾರಾಗುವ ಅತ್ಯಂತ ಸಿಂಪಲ್ ಪದಾರ್ಥ ಎಂದ್ರೆ ಬೇಯಿಸಿದ ಮೊಟ್ಟೆ. ಬಿಸಿ ನೀರಿಗೆ ನೀರು ಹಾಕಿ ಅದ್ರಲ್ಲಿ ಮೊಟ್ಟೆಯನ್ನು ಬೇಯಿಸಿದ್ರೆ ಸಾಕು ಬಾಯ್ಲಡ್ ಎಗ್ ತಯಾರಾಗಿ ಬಿಡುತ್ತದೆ. ಬೇಯಿಸಿದ ಮೊಟ್ಟೆಗಳಲ್ಲಿ ಯಾವೆಲ್ಲ ಅಂಶ ಇರುತ್ತೆ ಅನ್ನೋದನ್ನ ತಿಳಿದುಕೊಳ್ಳೋಣ.
ಪ್ರೋಟಿನ್ : ಬೇಯಿಸಿದ ಮೊಟ್ಟೆಗಳು ಪ್ರೋಟಿನ್ ಪ್ರಮುಖ ಮೂಲಗಳ ಪೈಕಿ ಒಂದಾಗಿದೆ. ಬೇಯಿಸಿದ ಒಂದು ಮೊಟ್ಟೆಯು 6 ಗ್ರಾಂ ಉತ್ತಮ ಗುಣಮಟ್ಟದ ಪ್ರೊಟೀನ್ ಹೊಂದಿರುತ್ತದೆ. ದೇಹಕ್ಕೆ ಹೆಚ್ಚು ಪ್ರೋಟಿನ್ ಅಗತ್ಯ ಇರುವವರಿಗೆ ಬೇಯಿಸಿದ ಮೊಟ್ಟೆ ತುಂಬಾನೇ ಸಹಕಾರಿ.
ವಿಟಾಮಿನ್ ಡಿ : ಮೊಟ್ಟೆಯಲ್ಲಿ ವಿಟಾಮಿನ್ ಡಿ ಅಂಶ ಕೂಡ ಇದೆ. ಒಂದು ಬೇಯಿಸಿದ ಮೊಟ್ಟೆಯಲ್ಲಿ ಆರು ಪ್ರತಿಶತ ವಿಟಾಮಿನ್ ಡಿ ಅಂಶ ಇರುತ್ತದೆ.
ಕೊಲೀನ್ : ಮೊಟ್ಟೆಗಳು ಕೊಲೀನ್ನ ಅತ್ಯುತ್ತಮ ಮೂಲಗಳಾಗಿವೆ. ಮೆದುಳಿನ ಆರೋಗ್ಯಕ್ಕೆ ಇದು ಅಗತ್ಯವಾಗಿ ಬೇಕಾಗಿರುವ ಅಂಶವಾಗಿದೆ.
ಲುಟೀನ್ ಮತ್ತು ಝೀಕ್ಸಾಂಥಿನ್: ಈ ಎರಡು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ಮೊಟ್ಟೆಯ ಹಳದಿ ಭಾಗಗಳಲ್ಲಿ ಕಂಡುಬರುತ್ತವೆ ಮತ್ತು ಕಣ್ಣಿನ ಆರೋಗ್ಯಕ್ಕೆ ಅವಶ್ಯಕವಾಗಿದೆ.
ಆಮ್ಲೆಟ್‌ಗಳು : ಆಮ್ಲೆಟ್‌ಗಳು ಬೆಳಗ್ಗಿನ ತಿಂಡಿಗೆ ಉತ್ತಮ ಆಯ್ಕೆಯಾಗಿದೆ. ಇದು ನಾಲಿಗೆಗೆ ರುಚಿ ಎನಿಸುವುದು ಮಾತ್ರವಲ್ಲದೇ ಅಗಾಧ ಪ್ರಮಾಣದ ಪೋಷಕಾಂಶಗಳನ್ನು ಸಹ ಒದಗಿಸುತ್ತವೆ.
ಫೈಬರ್: ತರಕಾರಿಗಳಿಂದ ತುಂಬಿದ ಆಮ್ಲೆಟ್‌ಗಳು ಫೈಬರ್ನ ಉತ್ತಮ ಮೂಲವಾಗಿದೆ. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಫೈಬರ್ ಅತ್ಯಗತ್ಯ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಬ್ಬಿಣಾಂಶ: ಕಬ್ಬಿಣಾಂಶವು ಅಗತ್ಯವಾದ ಖನಿಜವಾಗಿದ್ದು ಅದು ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಮತ್ತು ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸಲು ಕಾರಣವಾಗಿದೆ. ಪಾಲಕ್ ಸೊಪ್ಪಿನ ಜೊತೆ ಮಾಡಿದ ಆಮ್ಲೆಟ್‌ಗಳು ನಿಮ್ಮ ದೇಹದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ವಿಟಮಿನ್ ಸಿ : ತರಕಾರಿಗಳಿಂದ ತುಂಬಿದ ಆಮ್ಲೆಟ್‌ಗಳು ವಿಟಾಮಿನ್ ಸಿಯನ್ನು ಒದಗಿಸುತ್ತವೆ.. ಇದರಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಕೂಡ ಸುಧಾರಿಸುತ್ತದೆ.
ಒಳ್ಳೆಯ ಕೊಬ್ಬು : ಮೊಟ್ಟೆಯಲ್ಲಿ ಆರೋಗ್ಯಕರ ಕೊಬ್ಬು ಇರುತ್ತದೆ. ಇದರಲ್ಲಿ ಇರುವ ಮೊನೋಸಾಚುರೇಟೆಡ್ ಹಾಗೂ ಪಾಲಿಸಾಚುರೇಟೆಡ್ ಕೊಬ್ಬುಗಳು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಅಮ್ಲೆಟ್ಗಳಲ್ಲಿ ಕಂಡು ಬರುವ ಕೊಬ್ಬಿನಂಶವನ್ನು ಹೃದ್ರೋಗವನ್ನು ಕಡಿಮೆ ಮಾಡುತ್ತದೆ.
ಎರಡರಲ್ಲಿ ಯಾವುದು ಒಳ್ಳೆಯದು..?
ಬೇಯಿಸಿದ ಮೊಟ್ಟೆಗಳು ಮತ್ತು ಆಮ್ಲೆಟ್‌ಗಳು ತಮ್ಮದೇ ಆದ ವಿಶಿಷ್ಟವಾದ ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೊಂದಿವೆ. ಬೇಯಿಸಿದ ಮೊಟ್ಟೆಗಳು ಪ್ರೋಟೀನ್, ವಿಟಮಿನ್ ಡಿ ಮತ್ತು ಕೋಲೀನ್‌ನ ಉತ್ತಮ ಮೂಲವಾಗಿದೆ, ಆದರೆ ಆಮ್ಲೆಟ್‌ಗಳು ಫೈಬರ್, ಕಬ್ಬಿಣ, ವಿಟಮಿನ್ ಸಿ ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿವೆ. ಅಂತಿಮವಾಗಿ, ನಿಮ್ಮ ಆರೋಗ್ಯಕ್ಕೆ ಉತ್ತಮ ಆಯ್ಕೆಯು ನಿಮ್ಮ ನಿರ್ದಿಷ್ಟ ಆಹಾರದ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಅವಲಂಬಿಸಿರುತ್ತದೆ.