
ನೀವು ಪ್ರತಿದಿನ ಎಷ್ಟು ಕ್ಯಾಲೋರಿಗಳನ್ನು ತಿನ್ನುತ್ತೀರಿ. ನಮ್ಮಂತ ಸಾಮಾನ್ಯರು ಅಬ್ಬಬ್ಬಾ ಅಂದ್ರೆ 1600-2000 ಕ್ಯಾಲೋರಿಗಳನ್ನ, ಅಥವಾ ಸಿಂಪಲ್ ಆಗಿ ಹೇಳುವುದಾದರೆ ಮೂರು ಮೀಲ್ ಗಳನ್ನ ತಿನ್ನುತ್ತೇವೆ. ಆದರೆ ಇಲ್ಲೊಬ್ಬ “ಬೀಸ್ಟ್” ದಿನಕ್ಕೆ 7000 ಕ್ಯಾಲೋರಿಗಳನ್ನ ಸೇವಿಸುತ್ತಾರೆ.
ಹೌದು, ಬ್ರಿಟಿಷ್ ಬಾಡಿಬಿಲ್ಡರ್ ಎಡ್ವರ್ಡ್ ಸ್ಟೀಫನ್ ಹಾಲ್ ಪ್ರತಿ ದಿನ 7,000 ಕ್ಯಾಲೋರಿಗಳನ್ನು ಸೇವಿಸುತ್ತಾರೆ. ‘ದಿ ಬೀಸ್ಟ್’ ಎಂದೂ ಕರೆಯಲ್ಪಡುವ ಎಡ್ಡಿ, 2017 ರಲ್ಲಿ ವಿಶ್ವದ ಸ್ಟ್ರಾಂಗೆಸ್ಟ್ ಮ್ಯಾನ್ ಸ್ಪರ್ಧೆಯನ್ನು ಗೆದ್ದಿದ್ದಾರೆ. ಈಗ ಸೆಪ್ಟೆಂಬರ್‌ನಲ್ಲಿ ಥಾರ್ ಜಾರ್ನ್ಸನ್ ಅವರೊಂದಿಗೆ ರಿಂಗ್‌ನಲ್ಲಿ ಮುಖಾಮುಖಿಯಾಗಲು ಸಿದ್ಧವಾಗುತ್ತಿದ್ದಾರೆ. ಈ ಪಂದ್ಯವನ್ನು ‘ಇತಿಹಾಸದ ಅತ್ಯಂತ ಸ್ಟ್ರಾಂಗ್ ಬಾಕ್ಸಿಂಗ್ ಪಂದ್ಯ’ ಎಂದು ನಿರೀಕ್ಷಿಸಲಾಗಿದೆ.
ಟಾಯ್ಲೆಟ್ ಫ್ಲಶ್ ಅತಿಯಾದ ಸದ್ದಿನಿಂದ ಮಾನವ ಹಕ್ಕುಗಳ ಉಲ್ಲಂಘನೆ : ಇಟಲಿ ಕೋರ್ಟ್ ಮಹತ್ವದ ಆದೇಶ
ಆಂಗ್ಲ ಟಿವಿ ಶೋ ಗೇಮ್ ಆಫ್ ಥ್ರೋನ್ಸ್‌ನಲ್ಲಿ ದಿ ಮೌಂಟೇನ್ ಪಾತ್ರ ನಿರ್ವಹಿಸಿ ಜನಪ್ರಿಯರಾಗಿರುವ ಸ್ಟೀಪನ್ ಅವ್ರಿಗೆ, ಆತನ ಪತ್ನಿ ಅಲೆಕ್ಸಾಂಡ್ರಾಳೆ ಡಯಟಿಷಿಯನ್ ಆಗಿದ್ದಾರೆ ಅಂದ್ರೆ ತಪ್ಪಾಗಲ್ಲ. ಆತನ ಪ್ರತಿಯೊಂದು ಮೀಲ್ ಡಿಸೈಡ್ ಮಾಡುವ ಅಲೆಕ್ಸಾಂಡ್ರಾ ಎಡ್ಡಿಯ ಆಹಾರಕ್ರಮವನ್ನು ನೋಡಿಕೊಳ್ಳುತ್ತಾರೆ.
ದಿನಕ್ಕೆ ಆರು ಮೀಲ್, 7000 ಕ್ಯಾಲೋರಿ, ಇದು ಎಡ್ಡಿಯವರ ಆಹಾರದ ಸಿಂಪ್ಲಿಫೈಡ್ ವ್ಯಾಖ್ಯಾನ. ಆದರೆ ಈ ಡಯಟ್ ಒಬ್ಬ ಸಾಮಾನ್ಯ ಮನುಷ್ಯ ತಿನ್ನುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು. ಎಡ್ಡಿಯ ಆಹಾರ ಕ್ರಮವು ಅವರ ಗುರಿ ಅಥವಾ ಅವರು ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದರ ಆಧಾರದ ಮೇಲೆ ಬದಲಾಗುತ್ತದೆ. ಪ್ರಸ್ತುತ ಅವರು ಕೊಲೆಸ್ಟರಾಲ್ ಕಳೆದುಕೊಂಡು, ಸ್ನಾಯುಗಳನ್ನು ಕಾಪಾಡಿಕೊಳ್ಳುವುದರ ಜೊತೆಗೆ ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಅವರು ದಿನಕ್ಕೆ ಸುಮಾರು 7,000 ಕ್ಯಾಲೋರಿಗಳನ್ನು ತಿನ್ನುತ್ತಾರೆ ಎಂದು ಅಲೆಕ್ಸಾಂಡ್ರಾ ಹೇಳಿದ್ದಾರೆ.
ಎಡ್ಡಿ ಸಾಮಾನ್ಯವಾಗಿ ದಿನಕ್ಕೆ ಆರು ಮೀಲ್ ಗಳನ್ನು ತಿನ್ನುತ್ತಾರೆ. ಅವರ ಡಯಟ್ ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ ಮತ್ತು ತರಕಾರಿಗಳ ಮೇಲೆ ಕೇಂದ್ರೀಕೃತವಾಗಿದೆ. ಎಡ್ಡಿ ಸಾಮಾನ್ಯ ಗಾತ್ರದ ಊಟವನ್ನು ತಿನ್ನುವುದಿಲ್ಲ ನಮ್ಮ ಪ್ಲೇಟ್ ನ ನಾಲ್ಕರಷ್ಟು ಆಹಾರವನ್ನು ದಿನದ ಆರು ಬಾರಿ ತಿನ್ನುತ್ತಾರೆ ಎಂದು ಆತನ ಪತ್ನಿ ಹೇಳಿದ್ದಾರೆ. 34 ವರ್ಷದ ಎಡ್ಡಿ ಎತ್ತರ 6.3 ಅಡಿ, ಅವರ ತೂಕ 160 ಕೆ.ಜಿ. ಎಂದು ವರದಿಯಾಗಿದೆ.