ನವದೆಹಲಿ: ಹರಿಯಾಣದ ಸೋನಿಪತ್ ಜಿಲ್ಲೆಯ ಕುಂಡ್ಲಿಯಲ್ಲಿ ನಡೆದ ಕ್ರೂರ ಹತ್ಯೆ ಪ್ರಕರಣ ಬೆಚ್ಚಿ ಬೀಳಿಸವಂತಿದೆ. ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ವ್ಯಕ್ತಿಯೊಬ್ಬರನ ಕೈಕಾಲು ಕಡಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತದೇಹವನ್ನು ನೇತು ಹಾಕಲಾಗಿದ್ದು, ರಕ್ತದ ಕೋಡಿಯೇ ಹರಿದಿದೆ.
ಸಿಂಘು ಗಡಿಯಲ್ಲಿರುವ ರೈತರ ಪ್ರತಿಭಟನಾ ಸ್ಥಳದಲ್ಲಿ ಇಂದು ಬೆಳಿಗ್ಗೆ ಉರುಳಿದ ಪೊಲೀಸ್ ಬ್ಯಾರಿಕೇಡ್‌ಗೆ ಮೃತದೇಹ ಕಟ್ಟಿರುವುದು ಕಂಡುಬಂದಿದೆ.
ಇಂದು ಮುಂಜಾನೆ 5 ಗಂಟೆಗೆ, ರೈತರ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ(ಕುಂಡ್ಲಿ, ಸೋನಿಪತ್) ಕೈಗಳು, ಕಾಲುಗಳನ್ನು ಕತ್ತರಿಸಿದ, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಯಾರು ಹೊಣೆಗಾರರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಜ್ಞಾತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಡಿಎಸ್ಪಿ ಹಂಸರಾಜ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಯುವಕ 35 ವರ್ಷದವನಾಗಿದ್ದು, ತಮ್ ತರನ್ ಜಿಲ್ಲೆಯ ಲಖ್ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ಹರ್ನಮ್ ಸಿಂಗ್ ಅವರ ದತ್ತು ಪುತ್ರನಾಗಿರು ಲಖ್ವೀರ್ ಸಿಂಗ್ ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿದ್ದು, ಒಬ್ಬ ಸಹೋದರಿ, ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ, ಅವರಲ್ಲಿ ಹಿರಿಯ ಮಗನಿಗೆ ಕೇವಲ 12 ವರ್ಷ.
ಹರಿಯಾಣದ ಸೋನಿಪತ್ ಜಿಲ್ಲೆಯ ಕುಂಡ್ಲಿಯಲ್ಲಿ ನಡೆದ ಕ್ರೂರ ಮತ್ತು ಅನಾರೋಗ್ಯಕರ ಕೊಲೆಗೆ ನಿಹಾಂಗ್ಸ್ – ‘ಯೋಧ’ ಸಿಖ್ ಗುಂಪು ಕಾರಣ ಎಂದು ಹೇಳಲಾಗಿದೆ. ಹತ್ಯೆಗೆ ಸಂಬಂಧಿಸಿದ ಹಲವು ವಿಡಿಯೋ ತುಣಕು ಹರಿದಾಡಿವೆ.