ವ್ಯಾಯಾಮದ ಮುಖ್ಯ ಉದ್ದೇಶ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದು ಮತ್ತು ದೇಹ ತೂಕ ಕಡಿಮೆ ಮಾಡುವುದು. ಆದರೆ ವ್ಯಾಯಾಮವಾದ ಬಳಿಕ ನೀವು ಈ ತಪ್ಪುಗಳನ್ನು ಮಾಡುವುದರಿಂದ ನಿಮ್ಮ ವ್ಯಾಯಾಮದ ಉದ್ದೇಶ ಸಫಲವಾಗದೆ ಇರಬಹುದು.
ವ್ಯಾಯಾಮದ ಬಳಿಕ ಪ್ರೊಟೀನ್ ಹೆಚ್ಚಿರುವ ಪದಾರ್ಥಗಳನ್ನು ಸೇವನೆ ಮಾಡಬೇಕು ಎಂಬುದೇನೋ ನಿಜ. ಆದರೆ ಅದು ವಿಪರೀತ ಹೆಚ್ಚಾದರೆ ನಿಮ್ಮ ದೇಹ ತೂಕ ಇಳಿಯುವುದಿಲ್ಲ. ಬದಲಾಗಿ ಕೊಬ್ಬಿನ ರೂಪದಲ್ಲಿ ಶೇಖರಣೆಯಾಗಿ ದಿನದಿಂದ ದಿನಕ್ಕೆ ತೂಕ ಹೆಚ್ಚುತ್ತದೆ.
ಕೇವಲ ವ್ಯಾಯಾಮ ಮಾಡುವುದರಿಂದ ದೇಹ ತೂಕ ಇಳಿಯದು. ಅದರ ಜೊತೆಗೆ ವಾಕಿಂಗ್, ಜಾಗಿಂಗ್ ಗಳನ್ನೂ ಮಾಡಿ. ಊಟ ತಿಂಡಿ ತಿನಿಸುಗಳ ಸೇವನೆಯಲ್ಲೂ ಕಂಟ್ರೋಲ್ ಮಾಡುವುದು ಬಹಳ ಮುಖ್ಯ. ಹೆಚ್ಚು ನೀರಿನಂಶ ದೇಹದಲ್ಲಿ ಇರುವಂತೆಯೂ ನೋಡಿಕೊಳ್ಳಬೇಕು.
ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ಕೂಡಾ ಅಷ್ಟೇ ಅಪಾಯಕಾರಿ. ಇದರಿಂದ ಹೆಚ್ಚು ಕ್ಯಾಲೊರಿಗಳನ್ನು ಕರಗಿಸಬಹುದು ಎಂದು ನೀವು ತಿಳಿದುಕೊಂಡಿದ್ದರೆ ಅದು ನಿಮ್ಮ ತಪ್ಪು. ವ್ಯಾಯಾಮ ಮಾಡುವ ಕನಿಷ್ಠ ಒಂದು ಗಂಟೆ ಮೊದಲು ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರವನ್ನು ಸೇವನೆ ಮಾಡಿ. ಇದರಿಂದ ಬೊಜ್ಜಿನಂಶವೂ ಕಡಿಮೆಯಾಗುತ್ತದೆ.