ದೇಹದ ಅಂಗಾಂಶಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ವಿಟಮಿನ್ ಎಫ್ ತುಂಬಾ ಅಗತ್ಯ. ಒಂದು ವೇಳೆ ಇದು ಕಡಿಮೆಯಾದರೆ ಒಣಚರ್ಮ, ಕೂದಲುದುರುವ ಸಮಸ್ಯೆ, ಮೆದುಳು, ಕಣ್ಣಿನ ಸಮಸ್ಯೆ ಕಾಡುತ್ತದೆ. ಹಾಗಾಗಿ ವಿಟಮಿನ್ ಎಫ್ ಸಮೃದ್ಧವಾಗಿರುವಂತಹ ಈ ಆಹಾರಗಳನ್ನು ಸರಿಯಾಗಿ ಸೇವಿಸಿ.
*ವೆಜಿಟಬಲ್ ಆಯಿಲ್ : ಇದನ್ನು ಸಸ್ಯ ಬೀಜದಿಂದ ಅಥವಾ ಹಣ್ಣುಗಳ ಬೀಜದಿಂದ ಹೊರತೆಗೆಯಲಾಗುತ್ತದೆ. ಕಡಲೆಕಾಯಿ, ಆಲಿವ್, ಸೋಯಾಬೀನ್, ಸೂರ್ಯ ಕಾಂತಿ ಎಣ್ಣೆಯಲ್ಲಿ ವಿಟಮಿನ್ ಎಫ್ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ.
*ಬೀಜಗಳು : ಬಾದಾಮಿ, ವಾಲ್ ನಟ್ಸ್, ಅಗಸೆ, ಕುಂಬಳಕಾಯಿ ಮುಂತಾದವುಗಳಲ್ಲಿ ವಿಟಮಿನ್ ಎಫ್ ಸಮೃದ್ಧವಾಗಿದೆ. ಹಾಗೇ ಇದು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ಇದು ಹೃದಯದ ರಕ್ತನಾಳವನ್ನು ರಕ್ಷಿಸುತ್ತದೆ.