ಗುರುಗ್ರಾಮ್: ಇಫ್ಕೋ ಚೌಕ್ ಬಳಿ ಎಸೆದಿದ್ದ ಸೂಟ್ ಕೇಸ್‌ನಲ್ಲಿ 20-25 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯನ್ನು ಬೇರೆ ಕಡೆ ಕೊಲೆ ಮಾಡಲಾಗಿದೆ. ನಂತರ ಮೃತದೇಹವನ್ನು ತಂದು ಎಸೆಯಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ದೀಪಕ್ ಸಹರನ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಹಿಳೆಯನ್ನು ಬೇರೆಡೆ ಕೊಲೆ ಮಾಡಿ ನಂತರ ಶವವನ್ನು ಇಲ್ಲಿ ಬಿಸಾಡಲಾಗಿದೆ ಎಂದು ತೋರುತ್ತದೆ. ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಆಟೊ ಚಾಲಕ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಸೂಟ್ ಕೇಸ್‌ನಲ್ಲಿ ಶವ ತುಂಬಿರುವುದು ಕಂಡು ಬಂದಿದೆ.
ಮಾಹಿತಿಯ ನಂತರ, ಸಂಬಂಧಿತ ಪೊಲೀಸ್ ಠಾಣೆಯ ತಂಡ ಮತ್ತು ಅಪರಾಧ ವಿಭಾಗದ ತಂಡವು ವಿಧಿವಿಜ್ಞಾನ ತಂಡದೊಂದಿಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಸ್ಥಳಕ್ಕೆ ತಲುಪಿದೆ.
ಡಿಸಿಪಿ(ಪಶ್ಚಿಮ) ದೀಪಕ್ ಸಹರನ್, ಎಫ್‌ಐಆರ್ ದಾಖಲಿಸಲಾಗಿದ್ದು, ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ, ನಾವು ಮಹಿಳೆಯ ಗುರುತನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಆರೋಪಿ ಗುರುತಿಸಲು ಪೊಲೀಸರು ಸಮೀಪದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರಕರಣದ ತನಿಖೆಗೆ ಸೈಬರ್ ಕ್ರೈಂ ಸೆಲ್ ಮತ್ತು ಕ್ರೈಂ ಬ್ರಾಂಚ್ ನಿಂದಲೂ ಅಗತ್ಯ ಸಹಾಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.