ದೆಹಲಿ: ನ್ಯಾಷನಲ್ ಕಾನ್ಫರೆನ್ಸ್ ನಾಯಕ ತ್ರಿಲೋಚನ್ ಸಿಂಗ್ ವಜೀರ್ ದೆಹಲಿಯ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಧ್ಯ ದೆಹಲಿಯ ಮೋತಿ ನಗರದಲ್ಲಿರುವ ಮೂರನೇ ಮಹಡಿಯ ಫ್ಲ್ಯಾಟ್ ನಲ್ಲಿ ವಜೀರ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
67 ವರ್ಷದ ತ್ರಿಲೋಚನ್ ಸಿಂಗ್, ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯ ಮಾಜಿ ಶಾಸಕರೂ ಆಗಿದ್ದರು. ಸೆಪ್ಟೆಂಬರ್ 3ರಿಂದ ಕಾಣೆಯಾಗಿದ್ದರು. ಹೀಗಾಗಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.
BIG NEWS: ED ವಿಚಾರಣೆಗೆ ಹಾಜರಾದ ಟಾಲಿವುಡ್ ಸ್ಟಾರ್ ರವಿತೇಜ
ಇನ್ನು ಅಪಾರ್ಮೆಂಟ್ ನಲ್ಲಿ ದುರ್ವಾಸನೆ ಬರಲಾರಂಭಿಸಿದನ್ನು ಗಮನಿಸಿದ ಫ್ಲ್ಯಾಟ್ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬಂದು ತನಿಖೆ ಮಾಡಿದಾಗ, ಮನೆಯೊಳಗೆ ಶವ ಪತ್ತೆಯಾಗಿದೆ.
ಮೃತದೇಹದ ಪಕ್ಕದಲ್ಲೇ ಮೊಬೈಲ್ ಬಿದ್ದಿದ್ದರಿಂದ ಶವದ ಗುರುತು ಹಿಡಿಯಲು ಪೊಲೀಸರಿಗೆ ಸಹಕಾರಿಯಾಯಿತು ಎಂದು ಹೇಳಲಾಗಿದೆ. ಸದ್ಯ, ತ್ರಿಲೋಚನ್ ಸಿಂಗ್ ಶವವನ್ನು ಪೋಸ್ಟ್ ಮಾರ್ಟಮ್ ಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಅವರು ಹೇಗೆ ಮೃತಪಟ್ಟರು ಎಂಬ ಬಗ್ಗೆ ತಿಳಿಯುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.