ಮಾಟ ಮಂತ್ರ ಮಾಡಲು ಮೂರು ವರ್ಷದ ಬಾಲಕನೊಬ್ಬನನ್ನು ಕೊಲೆ ಮಾಡಿದ ಘಟನೆ ಆಗ್ರಾದಲ್ಲಿ ಜರುಗಿದೆ.
ಗುರು ಪೂರ್ಣಿಮೆಯ ರಾತ್ರಿಯಂದು ನಾಲ್ವರು ಪುರುಷರು ಹಾಗೂ ಮಹಿಳೆಯರು ಸೇರಿಕೊಂಡು ಬಾಲಕನನ್ನು ಕೊಂದು ಹೂತು ಹಾಕಿ, ಮಾಟ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ ಬಳಿಕ ಪೊಲೀಸರು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಬಾಲಕನ ದೇಹವನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಾಲಕನ ಗುರುತು ಪತ್ತೆ ಮಾಡಲು ಪ್ರಯತ್ನಗಳು ಸಾಗಿದ್ದು, ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಇಲ್ಲಿನ ಪಿನ್ಹಾತ್ ಠಾಣಾಧಿಕಾರಿ ಪ್ರದೀಪ್ ಕುಮಾರ್ ಚತುರ್ವೇದಿ ತಿಳಿಸಿದ್ದಾರೆ.