ಕ್ಲೆನ್ಸಿಂಗ್ನಿಂದ ನಿಮ್ಮ ಜೀರ್ಣಕ್ರಿಯೆಗೆ ವಿರಾಮ ಸಿಗುವುದಲ್ಲದೇ ರಿಪೇರ್ ಆಗಲು ಅವಕಾಶ ಸಿಗುತ್ತದೆ. ನರವ್ಯೂಹ ಮತ್ತು ಮಿದುಳಿಗೆ ಶಾಂತತೆ ಒದಗಿಸುತ್ತದೆ.
ಮಾನಸಿಕ, ದೈಹಿಕ, ಅಧ್ಯಾತ್ಮಿಕ, ಭಾವನಾತ್ಮಕ ವಿಷಯದಲ್ಲಿ ಸ್ಥಿರತೆ ಸಿಗುತ್ತದೆ.
ಜೀವನಕ್ಕೆ ಅಗತ್ಯವಾದ ಉತ್ಸಾಹವನ್ನು ನೀಡುತ್ತದೆ.
ದೇಹದ ತೂಕವನ್ನು ಸಮತೋಲನದಲ್ಲಿಡುತ್ತದೆ.
ನಿದ್ರಾಹೀನತೆ ಕೊರತೆ ನೀಗಿಸಿ, ಸುಖ ನಿದ್ರೆಗೆ ಕಾರಣವಾಗುತ್ತದೆ.
ದೇಹಕ್ಕೆ ಪೋಷಕಾಂಶವನ್ನು ಹೀರಿಕೊಳ್ಳುವ ಶಕ್ತಿ ನೀಡುತ್ತದೆ.
ಕ್ಲೆನ್ಸ್ ಮಾಡೋದು ಹೇಗೆ?
ಇಷ್ಟೆಲ್ಲಾ ಪ್ರಯೋಜನಗಳಿರುವ ಕ್ಲೆನ್ಸಿಂಗ್ ಅನ್ನು ಮಾಡೋದು ಬಹಳ ಸುಲಭ. ಮೊದಲಿಗೆ ನಿಮ್ಮ ಡೆಯಟ್ ಮತ್ತು ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ತನ್ನಿ.
ಮೊನೊ ಡಯೆಟ್ ಅಳವಡಿಸಿಕೊಳ್ಳಿ. ಸರಾಗವಾಗಿ ಜೀರ್ಣವಾಗುವ ಕಿಚಡಿ, ಡಿ ಟಾಕ್ಸ್ ಜ್ಯೂಸ್ ಸೇವನೆ. ಇತಿ ಮಿತಿಯಲ್ಲಿರಿ.
ಗೋಧಿ ಹಿಟ್ಟು, ಡೈರೀ ಉತ್ಪ್ನ, ಸೋಯಾ ಸೇವನೆ ಬೇಡ.
ಯಥೇಚ್ಚವಾಗಿ ನೀರು ಕುಡಿಯುವುದು, ಗಟ್ಟಿ ಪದಾರ್ಥಗಳನ್ನು ಸೇವಿಸದೇ ಇರುವುದು ಇದೆಲ್ಲವೂ ಕೋಶಗಳನ್ನು ರಿಜೆನ್ಯೂಯೇಟ್ ಮಾಡುತ್ತವೆ.
ವಯಸ್ಸು 30 ದಾಟಿದ ಮೇಲೆ ಈ ರೀತಿ ಕ್ರಮಗಳನ್ನು ಅನುಸರಿಸುವುದು ಹೆಚ್ಚು ಪ್ರಯೋಜನಕಾರಿ. ಅಲ್ಲದೇ ನಿಮಗೆ ಮುಟ್ಟಿನ ಸಮಸ್ಯೆ, ಸಂತಾನಕ್ಕೆ ಪ್ರಯತ್ನಪಡುತ್ತಿದ್ದರೆ, ಮಾನಸಿಕ ಅಸಮತೋಲನ, ಥೈರಾಯ್ಡ್, ಹಾರ್ಮೋನಲ್ ಸಮಸ್ಯೆ ಇದ್ದರೆ ಈ ಕ್ಲೆನ್ಸಿಂಗ್ ಅಳವಡಿಸಿಕೊಳ್ಳಿ. ದೇಹದ ಒಳಗೆ ಶುದ್ಧಿಯಾದಷ್ಟು ದೇಹ ಹೆಚ್ಚು ಬಲಗೊಳ್ಳುತ್ತದೆ. ದೈಹಿಕ ಸಾಮರ್ಥ್ಯ ಹೆಚ್ಚಿದ್ದಷ್ಟು ದೇಹ ಆರೋಗ್ಯದಿಂದ ನಳನಳಿಸುತ್ತದೆ.