ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಬರೋಡಾ ಗ್ರಾಹಕರಿಗೆ ಖುಷಿ ಸುದ್ದಿಯನ್ನು ನೀಡಿದೆ. ಬ್ಯಾಂಕ್ ನಲ್ಲಿ ಖಾತೆ ತೆರೆದಾಗ ಖಾತೆಯಲ್ಲಿ ಬ್ಯಾಲೆನ್ಸ್ ಇರ್ಬೇಕಾಗುತ್ತದೆ. ಇದು ಅನೇಕರಿಗೆ ತಲೆನೋವಿನ ಕೆಲಸ. ಈಗ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಗ್ರಾಹಕರಿಗೆ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ ತೆರೆಯುವ ಅವಕಾಶವನ್ನು ನೀಡುತ್ತಿದೆ. ಈ ಬ್ಯಾಂಕಿನಲ್ಲಿ ಜೀವನಪರ್ಯಂತ ಶೂನ್ಯ ಬ್ಯಾಲೆನ್ಸ್ನೊಂದಿಗೆ ಖಾತೆ ತೆರೆಯಬಹುದು. ಇದಲ್ಲದೆ ಈ ಖಾತೆಯ ಅಡಿಯಲ್ಲಿ ಗ್ರಾಹಕರು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳನ್ನು ಸಹ ಪಡೆಯಬಹುದು.
ದೀಪಾವಳಿ ಹಬ್ಬ ಹತ್ತಿರ ಬರ್ತಿದೆ. ಈ ಹಬ್ಬದ ಋತುವಿನಲ್ಲಿ ಬ್ಯಾಂಕ್ ʼಉಮಾಗ್ ವಿತ್ ಬಿಒಬಿʼ ಎಂಬ ಅಭಿಯಾನ ಶುರುಮಾಡಿದೆ. ಇದರ ಅಡಿಯಲ್ಲಿ ಶೂನ್ಯ ಬ್ಯಾಲೆನ್ಸ್ನಲ್ಲಿ ಉಳಿತಾಯ ಖಾತೆ ತೆರೆಯಲು ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತಿದೆ. ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲ ಎಂದು ಚಿಂತೆ ಮಾಡುವ ಅಗತ್ಯ ಗ್ರಾಹಕರಿಗೆ ಇರೋದಿಲ್ಲ ಎಂದು ಬ್ಯಾಂಕ್ ಹೇಳಿದೆ.
ಶೂನ್ಯ ಉಳಿತಾಯ ಖಾತೆ ಜೊತೆ ಬ್ಯಾಂಕ್ ಜೀವಿತಾವಧಿವರೆಗೆ ಉಚಿತ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಸೌಲಭ್ಯ ನೀಡ್ತಿದೆ. ಇದಕ್ಕೆ ನೀವು ತ್ರೈಮಾಸಿಕ ಆಧಾರದ ಮೇಲೆ ಸಣ್ಣ ಬ್ಯಾಲೆನ್ಸ್ ಕಾಪಾಡಿಕೊಳ್ಳಬೇಕಾಗುತ್ತದೆ. ಗ್ರಾಹಕರು ಅರ್ಹರಾಗಿದ್ದರೆ ಬ್ಯಾಂಕ್ ಅವರಿಗೆ ಕ್ರೆಡಿಟ್ ಕಾರ್ಡ್ ಸೌಲಭ್ಯ ನೀಡುತ್ತದೆ. ಅಲ್ಲದೆ ಇದ್ರಲ್ಲಿ ಹಬ್ಬದ ಕೊಡುಗೆಗಳನ್ನು ನೀಡಲಾಗುತ್ತದೆ.
ಹಬ್ಬದ ಸಮಯದಲ್ಲಿ ಗ್ರಾಹಕರಿಗೆ ನೆರವಾಗಲು ಬ್ಯಾಂಕ್ ಅನೇಕ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಎಲೆಕ್ಟ್ರಾನಿಕ್ ಐಟಂ, ದಿನಸಿ, ಜೀವನಶೈಲಿಗೆ ಸಂಬಂಧಿಸಿದ ವಸ್ತು, ರಿಲಯನ್ಸ್ ಡಿಜಿಟಲ್, ಕ್ರೋಮಾ, ಮೇಕ್ಮೈಟ್ರಿಪ್, ಅಮೆಜಾನ್, ಬುಕ್ಮೈಶೋ, ಮೈಂತ್ರಾ, ಸ್ವಿಗ್ಗಿ, ಜೊಮಾಟೊ ಮತ್ತು ಇತರ ಬ್ರ್ಯಾಂಡ್ಗಳಿಂದ ವಿಶೇಷ ಕೊಡುಗೆಗಳನ್ನು ಪಡೆಯಬಹುದು.