ಉಡುಪಿ: ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ತ್ರಾಸಿ ಬೀಚ್ ನಲ್ಲಿ ಬೋಟ್ ಮುಳುಗಡೆಯಾಗಿ ರೈಡರ್ ಕಣ್ಮರೆಯಾಗಿದ್ದಾರೆ.
ಬೋಟ್ ನಲ್ಲಿದ್ದ ಪ್ರವಾಸಿಗ ಬಚಾವಾಗಿದ್ದು, ರೈಡರ್ ರವಿದಾಸ್ ನಾಪತ್ತೆಯಾಗಿದ್ದಾರೆ. ಲೈಫ್ ಜಾಕೆಟ್ ತೊಟ್ಟಿದ್ದ ಬೆಂಗಳೂರು ಮೂಲದ ಪ್ರಶಾಂತ್ ಪಾರಾಗಿದ್ದಾರೆ. ಕರಾವಳಿ ಪೊಲೀಸ್ ಪಡೆಯಿಂದ ರವಿದಾಸ್ ಗಾಗಿ ಹುಡುಕಾಟ ನಡೆಸಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.