ಕಾರವಾರ: ಉತ್ತರ ಕನ್ನಡ ಜಿಲ್ಲೆ ಗೋಕರ್ಣ ಸಮೀಪ ತದಡಿಯ ಮೂಡಂಗಿ ಬಳಿ ಪ್ರವಾಸಿಗರಿದ್ದ ಬೋಟ್ ಭಾನುವಾರ ಸಂಜೆ ಅರಬ್ಬಿ ಸಮುದ್ರದ ಹಿನ್ನೀರಿನಲ್ಲಿ ಪಲ್ಟಿಯಾಗಿದೆ.
ಅದೃಷ್ಟವಶಾತ್ 42 ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ ರಜೆ ಇದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದಾರೆ. ಹೈದರಾಬಾದ್, ತೆಲಂಗಾಣ, ಮಹಾರಾಷ್ಟ್ರ, ಹಾಸನ ಭಾಗದಿಂದ ಬಂದಿದ್ದ ಪ್ರವಾಸಿಗರು ಬೋಟ್ ನಲ್ಲಿ ವಿಹಾರಕ್ಕೆ ತೆರಳಿದ್ದಾರೆ. ಹಾಫ್ ಮೂನ್ ಬೀಚ್ ಕಡೆ ತೆರಳುವ ವೇಳೆ ಬೋಟ್ ಪಲ್ಟಿಯಾಗಿದೆ.
ಪ್ರವಾಸಿಗರು ನೀರಿನಲ್ಲಿ ಮುಳುಗಿದ್ದಾರೆ. ತಕ್ಷಣವೇ ಸ್ಥಳೀಯ ಬೋಟ್ ಮತ್ತು ಕರಾವಳಿ ಕಾವಲು ಪೊಲೀಸ್ ಪಡೆಯ ಬೋಟ್ ನಿಂದ ಪ್ರವಾಸಿಗರನ್ನು ರಕ್ಷಿಸಲಾಗಿದೆ. ಕೆಲವರು ಈಜಿಕೊಂಡು ದಡ ಸೇರಿದ್ದಾರೆ. ಪ್ರವಾಸಿಗರು ನೀರಲ್ಲಿ ಮುಳುಗಿದ್ದರಿಂದ ಮೊಬೈಲ್ ಸೇರಿದಂತೆ ಬೆಲೆ ಬಾಳುವ ವಸ್ತುಗಳು ನೀರು ಪಾಲಾಗಿವೆ. ಸ್ವಲ್ಪ ದೂರದಲ್ಲಿ ಬೋಟ್ ಮುಳುಗಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು.
(ಸಾಂದರ್ಭಿಕ ಚಿತ್ರ)