ಬೆಂಗಳೂರು: ನಿಗಮ -ಮಂಡಳಿ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಬೇಸರದ ಸುದ್ದಿ ಇಲ್ಲಿದೆ. ಸಂಕ್ರಾಂತಿ ವೇಳೆಗೆ ನಿಗಮ, ಮಂಡಳಿ ನೇಮಕಾತಿ ನಡೆಯುವ ಸಾಧ್ಯತೆ ಇದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಕುರಿತು ಮಾತನಾಡಿದ್ದು, ನಿಗಮ -ಮಂಡಳಿಗಳಲ್ಲಿ ಶಾಸಕರಷ್ಟೇ ಸಂಖ್ಯೆಯಲ್ಲಿ ಕಾರ್ಯಕರ್ತರಿಗೂ ಸ್ಥಾನಮಾನ ನೀಡಲಾಗುವುದು. ನೇಮಕಾತಿ ಪಟ್ಟಿ ಒಂದು ಹಂತಕ್ಕೆ ಬಂದಿದೆ. ಸಂಕ್ರಾಂತಿ ವೇಳೆಗೆ ನೇಮಕಾತಿ ಆದೇಶ ಹೊರ ಬೀಳಬಹುದು ಎಂದು ಹೇಳಿದ್ದಾರೆ.
ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನದ ವ್ಯವಸ್ಥೆ ಮಾಡಲಿದ್ದು, ಎಲ್ಲಾ ನಾಯಕರು ಕುಳಿತು ಚರ್ಚಿಸುತ್ತೇವೆ. ಕೇಂದ್ರ ನಾಯಕರು ಕೆಲವರಿಗೆ ಮಾತು ಕೊಟ್ಟಿದ್ದು, ಎಲ್ಲಾ ಮುಗಿದು ಸಂಕ್ರಾಂತಿ ವೇಳೆಗೆ ನೇಮಕಾತಿ ಆಗಬಹುದು ಎಂದು ಹೇಳಿದ್ದಾರೆ.
ತಿಂಗಳ ಹಿಂದೆಯೇ ನಿಗಮ -ಮಂಡಳಿಗಳ ನೇಮಕಾತಿಗೆ ಪ್ರಕ್ರಿಯೆ ಕೈಗೊಳ್ಳಲಾಗಿದ್ದಾದರೂ ಕಾಂಗ್ರೆಸ್ ವರಿಷ್ಠರ ಸೂಚನೆ ಮೇರೆಗೆ ಮುಂದೂಡಿಕೆಯಾಗಿತ್ತು.